ಬಾಗಲಕೋಟೆ : ಕಳೆದ ಕೆಲವು ತಿಂಗಳುಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಮಹಾರಾಷ್ಟ್ರದ ಮಹಿಳೆ ಒಬ್ಬಳು ಗರ್ಭಪಾತದಿಂದ ಸಾವನ್ನಪ್ಪಿದ್ದ ಘಟನೆ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ಮಹಾಲಿಂಗಪುರದಲ್ಲಿ ಎರಡನೇ ಪ್ರಕರಣ ಬೆಳಕಿಗೆ ಬಂದಿದ್ದು, ಹೆಣ್ಣು ಮಗುವೆಂದು ಗರ್ಭಪಾತ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು ಮಹಾಲಿಂಗಪುರದಲ್ಲಿ ಗರ್ಭಪಾತದಿಂದ ಮಹಾರಾಷ್ಟ್ರದ ಮಹಿಳೆ ಸಾವು ಕೇಸ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಗರ್ಭಪಾತ ಪ್ರಕರಣ ಬೆಳಕಿಗೆ ಬಂದಿದೆ. ಮಹಾಲಿಂಗಪುರದ ಪಾಟೀಲ್ ಆಸ್ಪತ್ರೆಯಲ್ಲಿ ಹೆಣ್ಣು ಮಗು ಎಂದು ಗರ್ಭಪಾತ ಮಾಡಿಸುವ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಈ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಹೆಣ್ಣು ಮಗು ಎಂದು ಗರ್ಭಪಾತ ಮಾಡಿಸಿದ್ದಾರೆ ಆದರೆ ಗಂಡು ಮಗು ಎಂದು ಗೊತ್ತಾದ ಹಿನ್ನೆಲೆ ಕೇಸ್ ಬಹಿರಂಗವಾಗಿದೆ. ಡಾಕ್ಟರ್ ರಾಜೇಂದ್ರ ಪಾಟೀಲ್ ವಿರುದ್ಧ ಗರ್ಭಪಾತ ಮಾಡಿದ ಆರೋಪ ಇದೀಗ ಕೇಳಿಬಂದಿದ್ದು, ಆಸ್ಪತ್ರೆಗೆ ಸ್ಥಳಕ್ಕೆ ಡಿಎಚ್ಒ ಸುವರ್ಣ ಕುಲಕರ್ಣಿ, ಟಿಎಚ್ ಓ ಮಲಘಾಣ ಭೇಟಿ ನೀಡಿದ್ದು, ಡೆಲಿವರಿ ಥಿಯೇಟರ್, ಸ್ಕ್ಯಾನಿಂಗ್ ಸೆಂಟರ್, ಎಂ ಆರ್ ಡಿ ರೂಮ್ ಸೀಜ್ ಮಾಡಲಾಗಿದೆ. ವೈದ್ಯ ಹಾಗೂ ಮಹಿಳೆ ಕುಟುಂಬಸ್ಥರ ವಿರುದ್ಧ ದೂರು ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.