ಬೆಳಗಾವಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ಕುಟುಂಬ ಸಮೇತ ಮನೆಯನ್ನು ತೊರೆಯುತ್ತಿದ್ದಾರೆ. ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಘಟನೆ ನಡೆದಿದ್ದು, ಬಾಣಂತಿಯನ್ನು ಹೊರಹಾಕಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಮನೆಗೆ ಬೀಗ ಜಡಿದಿರುವ ಘಟನೆ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಫೈನಾನ್ಸ್ ಕಿರುಕುಳಕ್ಕೆ ನೊಂದು ಗಣಪತಿ ಲಾಹೋರ್ ಎನ್ನುವ ಕುಟುಂಬ ಇದೀಗ ಕಣ್ಣೀರು ಹಾಕುತ್ತಿದೆ. ಒಂದು ತಿಂಗಳ ಮಗು ಸಮೇತ ಸಿಬ್ಬಂದಿಯಗಳು ಬಾಣಂತಿಯ ಕುಟುಂಬವನ್ನು ಹೊರಹಾಕಿದ್ದಾರೆ. ಮನೆ ಕಟ್ಟಲು ಗಣಪತಿ ಲಾಹೋರ್ 5 ಲಕ್ಷ ಸಾಲ ಪಡೆದಿದ್ದರು. ಅಫ್ಟೋಸ್ ಫೈನಾನ್ಸ್ ನಲ್ಲಿ 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು.
ಈಗಾಗಲೇ 3,50,000 ಸಾಲವನ್ನು ಗಣಪತಿಯವರು ಮರುಪಾವತಿ ಮಾಡಿದ್ದರು.ಅನಾರೋಗ್ಯ ಮಗಳ ಹೆರಿಗೆ ಕಾರಣದಿಂದ ಮುಂದಿನ ಕಂತುಗಳನ್ನು ಗಣಪತಿಯವರು ಕಟ್ಟಿರಲಿಲ್ಲ. ಇದೀಗ 7 ಲಕ್ಷಕ್ಕೂ ಅಧಿಕ ಹಣಕಟ್ಟಿ ಅಂತ ಹೇಳಿ ಮನೆ ಸೀಜ್ ಮಾಡಿದ್ದಾರೆ. ನ್ಯಾಯಾಲಯದಿಂದ ಆದೇಶ ತಂದು ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಮನೆಯನ್ನು ಸೀಜ್ ಮಾಡಿದ್ದಾರೆ.
ನಿನ್ನೆ ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ, ಒಂದು ತಿಂಗಳ ಬಾಣಂತಿ ಹಾಗೂ ಹಸುಗೂಸು ಸೇರಿ ಮನೆಯ ಎಲ್ಲರನ್ನೂ ಹೊರಗೆ ಹಾಕಿದ್ದಾರೆ. ಪಾತ್ರೆ, ಬಟ್ಟೆಗಳನ್ನೆಲ್ಲ ಹೊರಗೆ ಎಸೆದು ಬೀಗ ಜಡಿದಿದ್ದಾರೆ. ಮನೆ ಗೋಡೆ ಮುಂದೆ ಇದು ಹರಾಜಿಗಿದೆ ಎಂದು ಬರೆದಿದ್ದಾರೆ.ಮನೆಯಲ್ಲಿ ಹಸಿ ಬಾಣಂತಿ, ಹಸುಳೆ, ಅನಾರೋಗ್ಯಕ್ಕೆ ಒಳಗಾದ ವೃದ್ಧೆ ಇದ್ದರು. ಕನಿಷ್ಠ ಸೌಜನ್ಯ ತೋರದ ಸಿಬ್ಬಂದಿ ಎಲ್ಲ ವಸ್ತುಗಳನ್ನು ಹೊರಗೆ ಹಾಕಿ, ಕುಟುಂಬವನ್ನು ಬೀದಿಪಾಲು ಮಾಡಿದರು.