ಬೆಂಗಳೂರು : ರಾಜ್ಯದ ಜನತೆಗೆ ಸರ್ಕಾರ ಜನತೆಗೆ ಮತ್ತೊಂದು ಬಿಗ್ ಶಾಕ್ ನೀಡಿದ್ದು, ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟುವ ನದಿಗಳಿಂದ ಕುಡಿಯುವ ನೀರು ಪಡೆಯುತ್ತಿರುವ ನಗರ ಹಾಗೂ ಪಟ್ಟಣಗಳಲ್ಲಿ ಹಸಿರು ಸೆಸ್ ವಿಧಿಸಲು ಅರಣ್ಯ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಲು ಮುಂದಾಗಿದೆ.ಪಶ್ಚಿಮಘಟ್ಟ ಅರಣ್ಯ ಪ್ರದೇಶದಿಂದಲೇ ತುಂಗಾ-ಭದ್ರಾ, ಕಾವೇರಿ, ಕೃಷ್ಣಾ, ಮಲಪ್ರಭ, ಘಟಪ್ರಭ, ಹೇಮಾವತಿ ಸೇರಿದಂತೆ 15ಕ್ಕೂ ಹೆಚ್ಚಿನ ನದಿಗಳು ಉಗಮವಾಗುತ್ತವೆ.
ಹಾಗಾಗಿ ಈ ನದಿಗಳ ನೀರನ್ನು ಬೆಂಗಳೂರು, ಮಂಡ್ಯ, ಮೈಸೂರು, ಶಿವಮೊಗ್ಗ, ಮಂಗ ಳೂರು, ಚಿಕ್ಕಮಗಳೂರು, ಬೆಳಗಾವಿ, ಬಳ್ಳಾರಿ ಸೇರಿದಂತೆ ಬಹುತೇಕ ಜಿಲ್ಲೆಗಳ ನಗರ ಮತ್ತು ಪಟ್ಟಣಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಪೂರೈಸ ಲಾಗುತ್ತಿದೆ. ಅಲ್ಲಿನ ಸ್ಥಳೀಯ ಜಲ ಮಂಡಳಿಯಿಂದ ನೀರಿನ ಸಂಪರ್ಕ ಪಡೆದವರಿಗೆ ನೀರಿನ ಬಿಲ್ನಲ್ಲಿ ಹಸಿರು ಸೆಸ್ ವಿಧಿಸುವ ಪ್ರಸ್ತಾವನೆ ಸಿದ್ಧಪಡಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
3 ರೂ. ವಿಧಿಸುವ ಸಾಧ್ಯತೆ
ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಹಸಿರು ಸೆಸ್ ವಿಧಿಸುವ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ. ಹಸಿರು ಸೆಸ್ ರೂಪದಲ್ಲಿ ಎಷ್ಟು ಮೊತ್ತವನ್ನು ವಿಧಿಸಬಹುದುಎಂಬುದೂ ಸೇರಿದಂತೆ ಇನ್ನಿತರವಿಚಾರಗಳ ಕುರಿತಂತೆ ಚರ್ಚಿಸಲಾಗುತ್ತಿದೆ. ಸದ್ಯದ ಮಾಹಿತಿಯಂತೆ, ಪ್ರತಿ ನೀರಿನ ಬಿಲ್ ಮೇಲೆ 2ರಿಂದ 3 ರು. ಹಸಿರು ಸೆಸ್ ವಿಧಿಸುವ ಸಾಧ್ಯತೆಗಳಿವೆ. ಅಷ್ಟು ಮೊತ್ತದ ಹಸಿರು ಸೆಸ್ ಸಂಗ್ರಹಿಸಿದರೆ ವಾರ್ಷಿಕ 60ರಿಂದ 80 ಕೋಟಿ ರು.ವರೆಗೆ ಹಸಿರು ಸೆಸ್ ಸಂಗ್ರಹಿಸಬಹುದು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಅಂದಾಜಾಗಿದೆ.
ಪಶ್ಚಿಮಘಟ್ಟ ಅರಣ್ಯ ಪ್ರದೇಶದ ನದಿಗಳ ನೀರು ಬಳಸುವ ಬಳಕೆದಾರರಿಂದ ಹಸಿರು ಸೆಸ್ ರೂಪದಲ್ಲಿ 2 ರಿಂದ 3 ರು. ಪಡೆಯುವ ಉದ್ದೇಶವಿದೆ. ಆ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆ ಮತ್ತು ಪಶ್ಚಿಮಘಟ್ಟದ ಮಹತ್ವದ ಅರಿವು ಮೂಡಿಸ ಬಹುದಾಗಿದೆ. ಹಸಿರು ಸೆಸ್ ರೂಪದಲ್ಲಿ ಸಂಗ್ರ ಹವಾಗುವ ಹಣವನ್ನು ಅರಣ್ಯ ಅಭಿವೃದ್ಧಿ ಸೇರಿ ಮತ್ತಿತರ ಕಾರ್ಯಕ್ಕೆ ಬಳಸಲಾಗುತ್ತದೆ