ಬಳ್ಳಾರಿ : ಇಂದು ಬೆಳಿಗ್ಗೆ ಟಿಪ್ಪರ್ ಹಾಗೂ ಕಾರು ಮಧ್ಯ ಬೀಗರ ಅಪಘಾತ ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆದಿತ್ತು. ಇದೀಗ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಸವಾರ ಬಾಲಕಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ನಗರದ ಪಾಲಿಟೆಕ್ನಿಕ್ ಕಾಲೇಜು ಬಳಿ ಈ ಒಂದು ಭೀಕರವಾದ ಅಪಘಾತ ಸಂಭವಿಸಿದೆ.
ಮೃತರನ್ನು ಅಬ್ದುಲ್ ಅರ್ಮಾನ್ (21) ಸಹೋದರನ ಪುತ್ರಿ ಹಸೀನಾ (5) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಅಬ್ದುಲ್ ಮತ್ತು ಹಸೀನಾ ಬಳ್ಳಾರಿ ನಗರದ ಗೊಬ್ಬರಹಟ್ಟಿಯ ನಿವಾಸಿಗಳು ಎಂದು ತಿಳಿದುಬಂದಿದೆ. ಘಟನೆ ಕುರಿತಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.