ರಾಮನಗರ : ಹಠ ಮಾಡುತ್ತೆ ಅಂತ ಮಗುವಿನ ಡೈಪರ್ ಒಳಗೆ ಖಾರ ಹಾಕಿ, ಕೈಗೆ ಬರೆ ಎಳೆದು ವಿಕೃತಿ ಮರೆದಿದ್ದ ಅಂಗನವಾಡಿ ಸಹಾಯಕಿಯನ್ನು ಇದೀಗ ಅಮಾನತು ಮಾಡಲಾಗಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜಕಟ್ಟೆಯಲ್ಲಿ ಇಂದು ಈ ಒಂದು ಘಟನೆ ನಡೆದಿತ್ತು, ಘಟನೆ ಸಂಭಂದ ಮಗುವಿನ ಪೋಷಕರು ಠಾಣೆಗೆ ದೂರು ನೀಡಿದ್ದರು ದೂರಿನ ಅನ್ವಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಅಂಗನವಾಡಿ ಸಹಾಯಕಿಯನ್ನು ಅಮಾನತು ಮಾಡಿದ್ದಾರೆ.
ಮಹಾರಾಜಕಟ್ಟೆ ಅಂಗನವಾಡಿಯಲ್ಲಿ ಈ ಒಂದು ಘಟನೆ ನಡೆದಿದ್ದು, ರಾಮನಗರದ ಕನಕಪುರ ತಾಲೂಕಿನ ಮಹಾರಾಜಕಟ್ಟೆ ಅಂಗನವಾಡಿಯಲ್ಲಿ ರಮೇಶ್ ಮತ್ತು ಚೈತ್ರ ದಂಪತಿಯ ಮಗು ಹಠ ಮಾಡುತ್ತೆ ಅಂತ ಡೈಪರ್ ನಲ್ಲಿ ಅಂಗನವಾಡಿ ಸಹಾಯಕಿ ಚಂದ್ರಮ್ಮ ಖಾರದ ಪುಡಿ ಹಾಕಿದ್ದಾಳೆ ಅಲ್ಲದೆ ಕೈಗೆ ಬರೆ ಎಳೆದು ವಿಕೃತಿ ಮೆರೆದಿದ್ದಾಳೆ.
ವಿಕೃತಿ ಮೆರೆದ ಅಂಗನವಾಡಿ ಸಹಾಯಕಿಯನ್ನು ಇದೀಗ ಅಮಾನತು ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಸಹಾಯಕಿಯನ್ನು ಸಸ್ಪೆಂಡ್ ಮಾಡಲಾಗಿದೆ. ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು ದೂರಿನ ಬಳಿಕ ಇಲಾಖೆಯ ಉಪ ನಿರ್ದೇಶಕರು ಅಂಗನವಾಡಿ ಸಹಾಯಕಿಯನ್ನು ಸಸ್ಪೆಂಡ್ ಮಾಡಿದ್ದಾರೆ.