ಕೊಪ್ಪಳ : ಸ್ನೇಹಿತರ ಜೊತೆಗೆ ಹಂಪಿ ಪ್ರವಾಸಕ್ಕೆ ಎಂದು ಬಂದಿದ್ದ ಹೈದರಾಬಾದ್ ಮೂಲದ ವೈದ್ಯೆ ನದಿಗೆ ಹಾರಿದ್ದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದ ಬಳಿ ನಡೆದಿತ್ತು. ಇದೀಗ ವೈದ್ಯೇ ಅನನ್ಯರಾವ್ ಶವವಾಗಿ ಪತ್ತೆಯಾಗಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಡಾ. ಅನನ್ಯಾ ರಾವ್ ಮತ್ತು ಇತರೆ ಇಬ್ಬರು ಸ್ನೇಹಿತರಾದ ಸತ್ವಿನ್ ಮತ್ತು ಹಶಿತಾ ಜತೆ ಹಂಪಿಗೆ ಪ್ರವಾಸಕ್ಕೆಂದು ಬಂದಿದ್ದರು.ಇದೇ ಸಂದರ್ಭದಲ್ಲಿ ಅನನ್ಯಾ ರಾವ್ ಸುಮಾರು 25 ಅಡಿ ಎತ್ತರದ ಬಂಡೆಯಿಂದ ನೀರಿಗೆ ಹಾರಿ ಈಜಲು ಬಯಸಿದರು. ಬಂಡೆಯಿಂದ ನೀರಿಗೆ ಹಾರಿದ ಅನನ್ಯಾ ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಈಜುತ್ತಿದ್ದರು. ಆದರೆ, ಶೀಘ್ರದಲ್ಲೇ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಕೊಚ್ಚಿಕೊಂಡು ಹೋದರು.
ಹೈದರಾಬಾದ್‌ನ ವಿಕೆಸಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಅನನ್ಯ, ರಜೆ ಕಳೆಯಲು ತಮ್ಮ ಸ್ನೇಹಿತರಾದ ಅಶಿತಾ ಮತ್ತು ಸಾತ್ವಿಕ್ ಜೊತೆ ಅನನ್ಯ ಅವರು ಸಣಾಪುರ ಸಮೀಪ ಇರುವ ಖಾಸಗಿ ಗೆಸ್ಟ್ ಹೌಸ್‌ಗೆ ಮಂಗಳವಾರ ಸಂಜೆ ಬಂದಿದ್ದರು. ಗೆಸ್ಟ್ ಹೌಸ್ ಹಿಂದೆ ಇರುವ ತುಂಗಭದ್ರಾ ನದಿಯಲ್ಲಿ ಈ ಮೂವರು ಈಜಲು ಹೋದಾಗ ದುರ್ಘಟನೆ ಸಂಭವಿಸಿದೆ. ಈ ಪೈಕಿ ಅನನ್ಯ, ನದಿಯಲ್ಲಿ ಈಜಲು ಸಮೀಪದ ಬಂಡೆಯೊಂದರ ಮೇಲಿಂದ ನೀರಿಗೆ ಜಿಗಿದಿದ್ದಾರೆ. ನದಿಯಲ್ಲಿನ ನೀರಿನ ಸೆಳೆತದಿಂದ ಕೊಚ್ಚಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.