ಬೆಂಗಳೂರು : ಆನಂದ್ ಗುರೂಜಿಗೆ ಹಣಕ್ಕೆ ಬ್ಲಾಕ್ ಮೇಲ್ ಮಾಡಿದ್ದು ಅಲ್ಲದೇ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಕ್ಕಜಾಲ ಠಾಣೆಗೆ ಆನಂದ್ ಗುರೂಜಿ ಇದೀಗ ದೂರು ನೀಡಿದ್ದಾರೆ. ಆನಂದ್ ಗುರೂಜಿ ದೂರಿನ ಮೇರೆಗೆ ಪೊಲೀಸರು ಇಬ್ಬರ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ.
A1 ಕೃಷ್ಣಮೂರ್ತಿ ಹಾಗು A2 ದಿವ್ಯ ವಸಂತ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆನಂದ್ ಗುರೂಜಿ ವಿಡಿಯೋ ಮತ್ತು ಜಮೀನು ಖರೀದಿಯ ಬಗ್ಗೆ ಕೋರ್ಟ್ ನಿಂದ ತಡೆಯಾಜ್ಞೆ ತಂದರೂ ಸಹ ಆನಂದ್ ಗುರೂಜಿಗೆ ಬೆದರಿಕೆ ಹಾಕಲಾಗಿದೆ. ಹಣಕ್ಕಾಗಿ ಬೆದರಿಸಿ ಬ್ಲಾಕ್ಮೇಲ್ ಮಾಡಿ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಆನಂದ ಗುರೂಜಿಯ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಹಾಗಾಗಿ ಚಿಕ್ಕಜಾಲ ಠಾಣೆ ಪೊಲೀಸರು ಇದೀಗ ತನಿಖೆ ಮುಂದುವರಿಸಿದ್ದಾರೆ.