ಚಿತ್ರದುರ್ಗ : ರಾಜ್ಯದಲ್ಲೊಂದು ಅಮಾನವೀಯ ಘಟನೆ ನಡೆದಿದ್ದು, ತಮ್ಮನಿಗೆ ಮಾರಣಾಂತಿಕ ಕಾಯಿಲೆ ಇದ್ದಿದ್ದರಿಂದ ಆಂಬುಲೆನ್ಸ್ ನಲ್ಲೆ ಆತನ ಅಕ್ಕ ಮತ್ತು ಭಾವ ಸೇರಿ ಉಸಿರಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಕಾಯಿಲೆಯಿಂದ ಸ್ವಂತ ಅಕ್ಕನೆ ತಮ್ಮನ ಹತ್ಯೆ ಮಾಡಿರುವುದು ಬೆಚ್ಚಿ ಬೀಳಿಸಿದೆ.
ಹೌದು ತಮ್ಮನಿಗೆ ಮಾರಣಾಂತಿಕ ಕಾಯಿಲೆ ಇದ್ದಿದ್ದರಿಂದ ಆಂಬುಲೆನ್ಸ್ ನಲ್ಲೆ ಆತನ ಅಕ್ಕ ಮತ್ತು ಭಾವ ಸೇರಿ ಉಸಿರಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಐಮಂಗಲ ಎಂಬಲ್ಲಿ ನಡೆದಿದೆ. ಚಿತ್ರದುರ್ಗದ ದುಮ್ಮಿ ಗ್ರಾಮದ ಅಕ್ಕ ನಿಶಾ ಹಾಗು ಭಾವ ಮಂಜುನಾಥ್ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.ಜುಲೈ 23 ರಂದು ಮಲ್ಲಿಕಾರ್ಜುನ ಗೆ ಅಪಘಾತವಾಗಿತ್ತು. ಗಾಯಳು ಮಂಜುನಾಥ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಈ ವೇಳೆ ಆತನಿಗೆ ರಕ್ತ ಪರೀಕ್ಷೆ ಮಾಡಲಾಗಿತ್ತು. ರಿಪೋರ್ಟ್ ನಲ್ಲಿ ಮಲ್ಲಿಕಾರ್ಜುನ ಗೆ ಮಾರಣಾಂತಿಕ ಕಾಯಿಲೆ ಇರೋದು ಗೊತ್ತಾಗಿದೆ. ಹಾಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಮಣಿಪಾಲ ಗೆ ಶಿಫ್ಟ್ ಮಾಡಲಾಯಿತು.ಈ ವೇಳೆ ಮಲ್ಲಿಕಾರ್ಜುನ ಅಕ್ಕ ನಿಶಾ ಭಾವ ಮಂಜುನಾಥ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಅಂತ್ಯಕ್ರಿಯೆ ವೇಳೆ ವೇಳೆ ಕುತ್ತಿಗೆ ಬಳಿ ಮಾರ್ಕ್ ಇರೋದು ಪತ್ತೆಯಾಗಿದೆ. ಕಾಯಿಲೆಗೆ ಅಂಜಿ ಮಲ್ಲಿಕಾರ್ಜುನ ನನ್ನು ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಮೃತನ ತಂದೆಯಿಂದ ದೂರು ಸಲ್ಲಿಸಲಾಗಿದೆ.