ನವದೆಹಲಿ:ಪಂಜಾಬ್ನ ಅಮೃತಸರದ ಮಜಿತಾ ಪ್ರದೇಶದಲ್ಲಿ ನಕಲಿ ಮದ್ಯ ಸೇವಿಸಿ 12 ಜನರು ಸಾವನ್ನಪ್ಪಿದ್ದು, ಇತರ ಐದು ಜನರ ಸ್ಥಿತಿ ಗಂಭೀರವಾಗಿದೆ.
ಅಮೃತಸರ (ಗ್ರಾಮೀಣ) ಎಸ್ಎಸ್ಪಿ ಮಣಿಂದರ್ ಸಿಂಗ್ ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದಾರೆ.
“ಇಲ್ಲಿಯವರೆಗೆ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ಗುಜರಾತ್ನ ನಾಡಿಯಾಡ್ನಲ್ಲಿ ಅನುಮಾನಾಸ್ಪದ ದ್ರವ ಬೆರೆಸಿದ ದೇಶೀಯ ಮದ್ಯವನ್ನು ಸೇವಿಸಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದರು