ಬೆಂಗಳೂರು : ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗೆ ನಿರ್ಬಂಧ ಹೇರಿದ್ದಾಯಿತು ಇದೀಗ ಮತ್ತೊಂದು ಪ್ಲಾನ್ ಮಾಡಿಕೊಂಡಿರುವ ರಾಜ್ಯ ಸರ್ಕಾರ ಆರ್ ಎಸ್ ಎಸ್ ಸಂಬಂಧಿತ ಸಂಸ್ಥೆಗಳ ಜಮೀನುಗಳಿಗೆ ಅಂಕುಶ ಹಾಕುವ ಚಿಂತನೆ ನಡೆಸುತ್ತಿದೆ. ಸಚಿವ ಪ್ರಿಯಾಂಕ ಖರ್ಗೆಗೆ ಕಾಂಗ್ರೆಸ್ ನಾಯಕರು ಈ ಕುರಿತು ಸಲಹೆ ನೀಡಿದ್ದು, ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಿದ್ದ ಭೂಮಿಯನ್ನು ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ.
ಸರ್ಕಾರ ಮಂಜೂರು ಮಾಡಿದ ಭೂಮಿ ಪರಿಶೀಲನೆಗೆ ಇದೀಗ ಚಿಂತನೆ ನಡೆಯುತ್ತಿದೆ. 2023ರಲ್ಲೂ ಸರ್ಕಾರ ಬಂದ ಆರಂಭದಲ್ಲೇ ಈ ಕುರಿತು ಪರಿಶೀಲನೆ ನಡೆದಿತ್ತು. ಬಳಿಕ ಆರ್ ಎಸ್ ಎಸ್ ಲ್ಯಾಂಡ್ ಆಡಿಟ್ ಸ್ಥಗಿತಗೊಂಡಿತ್ತು. ಹಂಚಿಕೆಯಾದ ವಿವಾಹಿತ ಭೂಮಿಗಳ ಶಾರ್ಟ್ ಲೀಸ್ಟ್ ಅಲ್ಲಿ ಪರಿಶೀಲನೆ ಕುರಿತು ಚಿಂತನೆ ನಡೆಸಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್ ಎಸ್ ಎಸ್ ಕೆ ಹಂಚಿದ್ದ ಜಮೀನು ಇದಾಗಿದ್ದು, ಹಂಚಿಕ ಮಂಡಿಸಿದ ಭೂಮಿಯನ್ನು ಸರ್ಕಾರ ಪರಿಶೀಲನೆ ಮಾಡಲಿದೆ.
ಬೆಂಗಳೂರಿನ ದೇವನಹಳ್ಳಿಯ ಗ ಹರಳೂರಿನಲ್ಲಿ ಚಾಣಕ್ಯ ವಿವಿಸ್ಥಾಪನೆಗೆ ಭೂಮಿ ಮಂಜೂರು ಮಾಡಿತ್ತು. ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರಕ್ಕೆ 116 ಎಕರೆ ಪ್ರದೇಶವನ್ನು ಮಂಜೂರು ಮಾಡಿದ್ದು, ಬೈಯಪ್ಪನಹಳ್ಳಿಯಲ್ಲೂ ಕೂಡ 8.32 ಎಕರೆ ಭೂಮಿ ಮಂಜುರು ಮಾಡಲಾಗಿದೆ ರಾಷ್ಟ್ರೋತ್ಥಾನ ಪರಿಷತ್ತಿಗೆ ಉದ್ದೇಶಗಳಿಗಾಗಿ ಭೂಮಿ ಮಂಜೂರು ಮಾಡಲಾಗಿದ್ದು ಹೊಸಪೇಟೆ ತಾಲೂಕಿನ ಜಂಬುನಾಥ ಹಳ್ಳಿಯಲ್ಲೂ ಜಮೀನು ಮಂಜೂರು ಮಾಡಲಾಗಿದೆ.
ಕಲ್ಬುರ್ಗಿ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಆನೇಕಲ್ ಹಾಗು ಯಾದಗಿರಿಯಲ್ಲೂ ಎಕರೆಗಟ್ಟಲೆ ಭೂಮಿ ಆರ್ ಎಸ್ ಎಸ್ ಗೆ ಮಂಜೂರು ಮಾಡಲಾಗಿದೆ. ರಾಷ್ಟ್ರೋತ್ಥಾನ ಪರಿಷತ್ತಿಗೆ 25 ರಿಂದ 30 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ದಕ್ಷಿಣ ಬೆಂಗಳೂರಿನ ಚೆನ್ನೇನಹಳ್ಳಿಯಲ್ಲೂ ಕೂಡ ಭೂಮಿ ಮಂಜೂರಾಗಿದೆ. ಹಾಗಾಗಿ ಈ ಒಂದು ಮಂಜೂರಾಗಿರುವ ಭೂಮಿಯ ಕುರಿತಂತೆ ರಾಜ್ಯ ಸರ್ಕಾರ ಚಿಂತನ ನಡೆಸುತ್ತಿದೆ ಒಂದೆಡೆ ಆರೆಸ್ಸೆಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಿದ ಬೆನ್ನಲ್ಲೆ, ಇದೀಗ ಆರ್ ಎಸ್ ಎಸ್ ಗೆ ಮಂಜೂರಾದ ಭೂಮಿಯ ಕುರಿತು ಪರಿಶೀಲನೆ ನಡೆಸಲಿದೆ.