ಹೈದ್ರಾಬಾದ್ : ಥಿಯೇಟರ್ ಬಳಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್’ರನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಕೋರ್ಟ್’ಗೆ ಹಾಜರು ಪಡೆಸಿದ್ದರು. ಸಧ್ಯ ಕೋರ್ಟ್ ತೀರ್ಪು ಹೊರ ಬಿದ್ದಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದೆ.
ಅಂದ್ಹಾಗೆ, ಹೈದರಾಬಾದ್ನಲ್ಲಿ ನಡೆದ ‘ಪುಷ್ಪ 2: ದಿ ರೈಸ್’ ಚಿತ್ರದ ಪ್ರೀಮಿಯರ್ನಲ್ಲಿ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತಕ್ಕೆ 39 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಅಪ್ರಾಪ್ತ ಮಗ ಗಂಭೀರ ಸ್ಥಿತಿಯಲ್ಲಿದ್ದಾನೆ. ಅದ್ರಂತೆ, ಇಂದು ಹೈದರಾಬಾದ್ ಪೊಲೀಸ್ ಅಧಿಕಾರಿಗಳು ಅಲ್ಲು ಅರ್ಜುನ್ ಅವರ ಮನೆಗೆ ಆಗಮಿಸಿ ಅವರನ್ನು ಮತ್ತು ಅವರ ವೈಯಕ್ತಿಕ ಅಂಗರಕ್ಷಕರನ್ನು ಬಿಗಿ ಭದ್ರತೆಯ ನಡುವೆ ವಶಕ್ಕೆ ತೆಗೆದುಕೊಂಡರು. ನಂತ್ರ ಕೋರ್ಟ್’ಗೆ ಹಾಜರು ಪಡೆಸಿದ್ದು, ಸಧ್ಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದೆ.
ಈ ನಡುವೆ “ಫ್ಲವರ್ ನಹೀ, ಫೈರ್ ಹೈ ಮೇ (ನಾನು ಹೂವು ಅಲ್ಲ, ನಾನು ಬೆಂಕಿ)” ಎಂಬ ಟ್ಯಾಗ್ ಲೈನ್ ಹೊಂದಿರುವ ಹುಡಿ ಧರಿಸಿದ ನಟನ ದೃಶ್ಯಗಳು ಅವರ ಪುಷ್ಪ ಚಿತ್ರದ ಪ್ರಸಿದ್ಧ ಸಂಭಾಷಣೆಯನ್ನು ಪೊಲೀಸರು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ. ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟ, ಪ್ರಕರಣ ದಾಖಲಾದ ಚಿಕ್ಕಡ್ಪಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯುವ ಮೊದಲು ತಮ್ಮ ಪತ್ನಿ ಸ್ನೇಹಾ ರೆಡ್ಡಿಯನ್ನು ತಬ್ಬಿಕೊಳ್ಳುತ್ತಿರುವುದು ಕಂಡುಬಂದಿದೆ.
BREAKING : 6 ತಿಂಗಳ ಬಳಿಕ ನಟ ‘ದರ್ಶನ್’ಗೆ ಜಾಮೀನು ; ಪೋಟೋಗೆ ಹಾಲಾಭಿಷೇಕ, ಸಿಹಿ ಹಂಚಿ ಆಭಿಮಾನಿಗಳ ಸಂಭ್ರಮ
ಪಾಕ್’ನೊಂದಿಗೆ ಭಾರತ ‘ಭಯೋತ್ಪಾದನೆ ಮುಕ್ತ ಸಂಬಂಧ’ ಬಯಸುತ್ತದೆ : ಸಚಿವ ಎಸ್. ಜೈಶಂಕರ್