ಹೈದ್ರಾಬಾದ್ : ಹೈದರಾಬಾದ್ ನಲ್ಲಿ ಪುಷ್ಪ -2 ಸಿನಿಮಾ ರಿಲೀಸ್ ಆದ ದಿನದಂದು ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತಕ್ಕೆ ಮಹಿಳೆಯೊಬ್ಬರು ಸಾವನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಅರೆಸ್ಟ್ ಮಾಡುವ ವೇಳೆ ಅಲ್ಲು ಅರ್ಜುನ್ ನಿವಾಸದಲ್ಲಿ ಭಾರಿ ಹೈಡ್ರಾಮ ನಡೆದಿದೆ.
ಹೌದು ನಟ ಅಲ್ಲು ಅರ್ಜುನ್ ಬಂಧನದ ವೇಳೆ ಹೈಡ್ರಾಮಾ ನಡೆಯಿತು ಹೈದರಾಬಾದ್ ನಲ್ಲಿರುವ ಅಲ್ಲು ಅರ್ಜುನ್ ಮಾಸದಲ್ಲಿ ಭಾರಿ ಹೈಡ್ರಾಮಾ ನಡೆದಿದೆ ಈ ವೇಳೆ ಪೊಲೀಸರು ಬೆಡ್ರೂಮ್ನಲ್ಲಿಯೇ ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಾರೆ ಬೆಳಗ್ಗೆ 11:45ಕ್ಕೆ ಪೊಲೀಸರು ಅಲ್ಲು ಅರ್ಜುನ್ ನಿವಾಸಕ್ಕೆ ಬಂದಿದ್ದರು ಮಧ್ಯಾಹ್ನ 12 ಗಂಟೆಗೆ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಬಂಧಿಸಿದ್ದಾರೆ.
ಚಿಕ್ಕಡಪಲ್ಲಿ ಠಾಣೆ ಪೋಲಿಸರು ನಟ ಅಲ್ಲು ಅರ್ಜುನ್ ಅವರನ್ನು ಸದ್ಯ ಅರೆಸ್ಟ್ ಮಾಡಿದ್ದಾರೆ.ಅವರ ವಿರುದ್ಧ ಜಾಮೀನು ರಹಿತ ಕೆಎಸ್ ಕೂಡ ದಾಖಲಾಗಿದೆ ಈ ಒಂದು ಪ್ರಕರಣದಲ್ಲಿ 5 ರಿಂದ 10 ವರ್ಷ ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೀಗ ನಟ ಅಲ್ಲು ಅರ್ಜುನ್ ವಿರುದ್ಧ ಬಿಎನ್ಎಸ್ ಸೆಕ್ಷನ್ 105 ಮತ್ತು 118(1) ಅಡಿಯಲ್ಲಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.