ಬೆಂಗಳೂರು : ರಾಜ್ಯದಲ್ಲಿ ಎನ್ ಐಎ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ ಮತ್ತು ನೆರವು ನೀಡಿದ ಆರೋಪದಡಿ ಮೂವರನ್ನು ಬಂಧಿಸಿದೆ.
ರಾಜ್ಯದ ಕೋಲಾರ ಮತ್ತು ಬೆಂಗಳೂರು ನಗರ ಜಿಲ್ಲೆಯ ಐದು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ. ನಾಗರಾಜ್, ಉತ್ತರ ವಿಭಾಗದ ನಗರ ಶಶಸ್ತ್ರ ಮೀಸಲು ಪಡೆ ಎಎಸ್ಐ ಚಾಂದ್ ಪಾಷಾ ಮತ್ತು ತಲೆ ಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಅಹಮದ್ ತಾಯಿ ಅನೀಸ್ ಫಾತಿಮಾ ಅವರನ್ನು ಬಂಧಿಸಲಾಗಿದೆ.
ಇದೀಗ ಬೆಂಗಳೂರಿನಲ್ಲಿ ಜೈಲಿನಲ್ಲಿರುವ ಉಗ್ರರಿಗೆ ನೆರವು ನೀಡಿದ ಆರೋಪ ಹಿನ್ನೆಲೆ ಎನ್ಐಎ ಅಧಿಕಾರಿಗಳ ತನಿಖೆಯ ವೇಳೆ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ವೈದ್ಯ ನಾಗರಾಜ್ ಕರ್ಮಕಾಂಡ ಬಯಲಾಗಿದೆ. ಸಹಾಯಕಿ ಪವಿತ್ರಗಳನ್ನು ಬಳಸಿಕೊಂಡು ಜೈಲಿಗೆ ಮೊಬೈಲ್ ಗಳನ್ನು ಪೂರೈಕೆ ಮಾಡುತ್ತಿದ್ದ ಜೈಲಿನಲ್ಲಿರುವ ಕೈದಿಗಳಿಗೆ ವೈದ್ಯ ನಾಗರಾಜ್ ಮೊಬೈಲ್ ಮಾರಾಟ ಮಾಡುತ್ತಿದ್ದ.
ಕೇವಲ 10 ಸಾವಿರ ಮೊಬೈಲ್ಗೆ 50,000 ಕ್ಕೆ ಮಾರಾಟ ಮಾಡುತ್ತಿದ್ದ ನಾಗರಾಜ್ ಶಂಕಿತ ಉಗ್ರರು, ಡ್ರಗ್ ಪೆಡ್ಲರ್ ಮತ್ತು ರೌಡಿಶೀಟರ್ ಗಳಿಗೆ ನಾಗರಾಜ್ ಮೊಬೈಲ್ ಸಪ್ಲೈ ಮಾಡುತ್ತಿದ್ದ. ನೂರಾರು ಮಂದಿಗೆ ವೈದ್ಯ ನಾಗರಾಜ್ ಮೊಬೈಲ್ ಸಪ್ಲೈ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ವೈದ್ಯಕೀಯ ಕೆಲಸ ಬಿಟ್ಟು ನಾಗರಾಜ್ ಮೊಬೈಲ್ ಮಾರಾಟ ಮಾಡುತ್ತಿದ್ದ. ಈ ಹಿಂದೆ ಸಿಸಿಬಿ ಅಧಿಕಾರಿಗಳು ಶಂಕಿತ ಉಗ್ರರ ಮನೆಯ ಮೇಲೆ ದಾಳಿ ಮಾಡಿದ್ದರು. ಸುಲ್ತಾನ್ ಪಾಳ್ಯ ಭದ್ರಪ್ಪ ಲೇಔಟ್ ನಲ್ಲಿ ಸಿಸಿಬಿ ತಂಡ ದಾಳಿ ಮಾಡಿತ್ತು.