ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರ ಸಭೆ ಆಯುಕ್ತೆ ಅಮೃತ ಗೌಡ ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಕ್ರಮವಾಗಿ ಕಟ್ಟಿದ ಬ್ಯಾನರ್ ತೆಗೆದಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದಿಸಿದ್ದು ಅಲ್ಲದೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ನಡೆದಿತ್ತು.
ಇದೀಗ ಈ ಒಂದು ವಿಚಾರವಾಗಿ ರಾಜೀವ್ ಗೌಡನ ಮತ್ತೊಂದು ದಾದಾಗಿರಿ ಬಯಲಾಗಿದ್ದು, ಶಿಡ್ಲಘಟ್ಟದ ತಹಶೀಲ್ದಾರ್ಗೂ ಕೂಡ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಏಕವಚನದಲ್ಲಿ ಬೈದಿರುವ ಆರೋಪ ಕೇಳಿ ಬಂದಿದೆ. ತಹಶೀಲ್ದಾರ್ ಆಗಿರುವ ಗಂಗನ ಸಿಂಧು ಇದೇ ರಾಜೇಗೌಡ ಕೆಲವು ದಿನಗಳ ಹಿಂದೆ ನನಗೆ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಅಷ್ಟೇ ಗಗನ ಸಿಂಧು ಅವರಿಗೆ ಏಕ ವಚನದಲ್ಲಿ ರಾಜೀವ್ ಗೌಡ ಬೈದಿರುವ ಆರೋಪ ಕೇಳಿ ಬಂದಿದೆ. ಅಮೃತ ಮತ್ತು ಸಚಿವ ಸುಧಾಕರ್ ಬಳಿ ಗಗನಸಿಂಧು ಈ ರೀತಿ ನನಗೆ ನಿಂದಿಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ಬೈದಿರುವ ಆಡಿಯೋ ಗಗನ ಸಿಂಧು ರೆಕಾರ್ಡ್ ಮಾಡಿಕೊಂಡಿಲ್ಲ.








