ಬೆಂಗಳೂರು : ಕಗ್ಗಲಿಪುರದ ಸರ್ಕಾರಿ ಜಮೀನು ಕೆರೆ ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಗುರೂಜಿ ವಿರುದ್ಧ ಎಫ್ಐಆರ್ ರದ್ದುಗೊಳಿಸಿ ಹೈಕೋರ್ಟ್ ನ್ಯಾಯಮೂರ್ತಿ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಬಿಎಂಟಿಎಫ್ ಪೊಲೀಸರು ಒತ್ತುವರಿ ಸಂಬಂಧ ರವಿಶಂಕರ್ ಗುರೂಜಿ ಎಫ್ಆರ್ ದಾಖಲಿಸಿದ್ದರು. ಒತ್ತೂವರಿ ಆರೋಪಕ್ಕು ಶ್ರೀ ರವಿಶಂಕರ್ ಗುರೂಜಿಗೂ ಯಾವುದೇ ಸಂಬಂಧವಿಲ್ಲ ಆಧಾರಗಳು ಇಲ್ಲದೆ ಎಫ್ಐಆರ್ ದಾಖಲಿಸಿದ್ದಾರೆ ಎಂದು ರವಿಶಂಕರ್ ಪರ ವಕೀಲ ಪಿ ಪ್ರಸನ್ನ ಕುಮಾರ್ ವಾದಿಸಿದ್ದರು. ಹೀಗಾಗಿ ಹೈಕೋರ್ಟ್ ರವಿಶಂಕರ್ ಗುರೂಜಿ ಅವರ ವಿರುದ್ಧ ದಾಖಲಾಗಿದ್ದ FIR ರದ್ದುಪಡಿಸಿ ಆದೇಶ ಹೊರಡಿಸಿದೆ.








