ಬೆಂಗಳೂರು : ಮದ್ಯ ಪ್ರಿಯರೇ ಬಿಯರ್ ಕುಡಿಯುವ ಮುನ್ನ ಆದಷ್ಟು ಎಚ್ಚರವಾಗಿರಿ. ಏಕೆಂದರೆ ಇದೀಗ ಅಧಿಕಾರಿಗಳಿಂದಲೇ ಅವಧಿ ಮೀರಿದ ಮದ್ಯ ಮಾರಾಟ ಮಾಡಿರುವ ಘಟನೆ ವರದಿಯಾಗಿದೆ. ಹಣದ ಆಸೆಗೆ ಅಬಕಾರಿ ಅಧಿಕಾರಿಗಳು ಕಳ್ಳದಾರಿ ಹಿಡಿದಿದ್ದಾರೆ ನಿಗಮದ ಸೂಪರ್ವೈಸರ್ ಮನೆಯಲ್ಲಿ ಅವಧಿ ಮೀರಿದ ಮದ್ಯ ಪತ್ತೆಯಾಗಿದೆ.
ವಿವಿಧ ಕಂಪನಿಗಳ 20 ಬಾಕ್ಸ್ ಗಳಲ್ಲಿ ಅವಧಿ ಮೀರಿದಂತಹ ಮಧ್ಯದ ಬಾಟಲಿಗಳು ಪತ್ತೆಯಾಗಿವೆ. ಗ್ರಾಮೀಣ ಭಾಗದಲ್ಲಿ ಅವಧಿ ಮೀರಿದ ಮದ್ಯಗಳನ್ನು ಮಾರಾಟಕ್ಕೆ ಪ್ಲಾನ್ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಐಜೂರು ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸುರೇಶ್ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಮದ್ಯ ಹಾಗೂ ಬಿಯರ್ ಡೇಟ್ ಎಕ್ಸ್ಪೈರಿ ಆದ ನಂತರ ಅವುಗಳನ್ನು ನಾಶಮಾಡುವ ನಿಯಮವಿದೆ. ಆದರೆ ಈ ಕಳ್ಳ ಅಧಿಕಾರಿಗಳು ಅವುಗಳನ್ನು ಒಂದು ಗೋಧಾಮಿನಲ್ಲಿ ಶೇಖರಣೆ ಮಾಡಿ ಗ್ರಾಮೀಣ ಭಾಗದಲ್ಲಿ ಅವಧಿಮರಿದ ಮಧ್ಯ ಮಾರಾಟ ಮಾಡುತ್ತಿದ್ದರು. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಇನ್ನು ಹಲವರ ಬಂಧನಕ್ಕೆ ಬಲೆ ಬೀಸಿದ್ದಾರೆ.








