ನವದೆಹಲಿ : ದೆಹಲಿಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಆಗಿದ್ದು, ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಆಗಿದೆ.
ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ AI887 ವಿಮಾನ ತುರ್ತು ಭೂಸ್ಪರ್ಶ ಆಗಿದೆ ವಿಮಾನದಲ್ಲಿ ಇದ್ದಂತಹ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಯಾವುದೇ ಅಪಾಯ ಆಗಿಲ್ಲ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ. ಸ್ವಲ್ಪದರಲ್ಲಿಯೇ ಮತ್ತೊಂದು ಅತಿ ದೊಡ್ಡ ಅನಾಹುತ ತಪ್ಪಿದೆ.








