ಬೆಂಗಳೂರು : ಇಸ್ರೇಲ್ ಇರಾನ್ ಯುದ್ಧ ಹಿನ್ನೆಲೆಯಲ್ಲಿ ಇದೀಗ ಬೆಂಗಳೂರು ಏರ್ಪೋರ್ಟ್ ನಿಂದ ವಿಮಾನ ಸಂಚಾರ ರದ್ದು ಮಾಡಲಾಗಿದೆ. ಅರಬ್ ರಾಷ್ಟ್ರಗಳಿಗೆ ತೇರಳಬೇಕಿದ್ದ 11 ವಿಮಾನಗಳ ರದ್ದು ಮಾಡಲಾಗಿದೆ.
ಅಲ್ಲದೇ ಆಗಮಿಸಬೇಕಿದ್ದ 10 ವಿಮಾನಗಳ ಹಾರಾಟ ರದ್ದು ಪಡಿಸಲಾಗಿದೆ. ಈ ಕುರಿತು ವಿಮಾನಗಳ ಸಂಚಾರದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ. ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೀಗ ಹೋಗುವ ಮತ್ತು ಬರುವ ವಿಮಾನಗಳನ್ನು ರದ್ದುಪಡಿಸಲಾಗಿದೆ.








