ಬೆಂಗಳೂರು : ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆಯ ವೇಳೆ ಇದೀಗ ಹಲವು ವಿಚಾರಗಳು ಬಹಿರಂಗವಾಗಿದೆ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶಾಸಕ ವಿನಯ್ ಕುಲಕರಣಿ ಹಾಗೂ ಮಾಫಿ ಸಾಕ್ಷಿ ಆಗಿದ್ದ ಬಸವರಾಜ್ ಮುಕ್ತಗಿ ಪರಸ್ಪರ 57 ಬಾರಿ ಮೊಬೈಲ್ ನಲ್ಲಿ ಮಾತನಾಡಿರುವುದು ಬೆಳಕಿಗೆ ಬಂದಿದೆ.
ಹೌದು ಸಿಬಿಐ ಅಧಿಕಾರಿಗಳ ತನಿಖೆಯ ವೇಳೆ ಈ ಒಂದು ಅಂಶ ಬೆಳಕಿಗೆ ಬಂದಿದ್ದು ಬಸವರಾಜ್ ಮುತ್ತಿಗಿ ಜೊತೆಗೆ ಮಾತನಾಡಲು ಶಾಸಕ ಮನೆಯಲ್ಲಿ ಕುಲಕರಣಿ ಪತ್ನಿ ಹೆಸರಿನಲ್ಲಿ ಸಿಮ್ ಖರೀದಿ ಮಾಡಿದರು ಆ ಸಿಮ್ ಬಳಸಿ 94 ಬಾರಿ ಶಾಸಕ ವಿನಯ್ ಕುಲಕರಣಿ ಮುತ್ತಗಿ ಜೊತೆಗೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ಯೋಗೇಶ್ ಗೌಡ ಕೊಲೆಯಾದ ನಂತರ ವಿನಯ್ ಕುಲಕರ್ಣಿ ಮತ್ತು ಬಸವರಾಜ್ ಮುತ್ತಗಿ 94 ಬಾರಿ ಪರಸ್ಪರ ಮಾತನಾಡಿದ್ದಾರೆ ಆರು ತಿಂಗಳಲ್ಲಿ ವಿನಯ್ ಹಾಗೂ ಮುತ್ತಗಿ 57 ಬಾರಿ ಪರಸ್ಪರ ಕರೆ ಮಾಡಿ ಮಾತನಾಡಿದರು. ಸಿಬಿಐ ಅಧಿಕಾರಿಗಳ ತನಿಖೆಯ ವೇಳೆ ಟವರ ಲೊಕೇಶನ್ ಟ್ರ್ಯಾಪ್ ಮಾಡಲಾಗಿದ್ದು, ಈ ವೇಳೆ ಆರು ಬಾರಿ ಇಬ್ಬರು ಒಂದೇ ಪ್ರದೇಶದಲ್ಲಿ ಇರುವುದು ಪತ್ತೆಯಾಗಿತ್ತು.








