ಬೆಳಗಾವಿ : ಬೆಳಗಾವಿಯಲ್ಲಿ ಹೈಟೆಕ್ ಕಳ್ಳನನ್ನು ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಧೂಮ್-1 ಸಿನಿಮಾ ನೋಡಿ 1.2 ಕೆಜಿ ಚಿನ್ನ ಕಳ್ಳತನ ಮಾಡಿದ್ದು ಬೆಳಗಾವಿಯಲ್ಲಿ ಪೋಲಿಸರು ಹೈಟೆಕ್ ಕಳ್ಳನನ್ನು ಇದೀಗ ಅರೆಸ್ಟ್ ಮಾಡಿದ್ದಾರೆ.
ಕಳ್ಳತನಕ್ಕೆ ಈತ ಪಲ್ಸರ್ ಬೈಕ್, ಸುತ್ತಾಡೋಕೆ ಥಾರ್ ಜೀಪ್, ಮತ್ತೊಂದು ದುಬಾರಿ ಬೈಕ್ ನಲ್ಲಿ ಸುತ್ತಡ್ತಿದ್ದ. ಶ್ರೀಮಂತರ ಮನೆನೇ ಈತನಿಗೆ ಟಾರ್ಗೆಟ್ ಆಗಿತ್ತು. ಕಳ್ಳತನ ಬಳಿಕ ಐಶಾರಾಮಿ ಜೀವನ ನಡೆಸುತ್ತಿದ್ದ ಕದೀಮ ಲಾಕ್ ಆಗಿದ್ದಾನೆ. ಮಹಾಂತೇಶ್ ನಗರದ ನಿವಾಸಿ ಸುರೇಶ ನಾಯಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತಾನಿಂದ ದುಬಾರಿ ಬೈಕ್, ಒಂದು ಪಲ್ಸರ್ ಬೈಕ್ ಹಾಗು ಥಾರ್ ಜೀಪ್ ಅನ್ನು ವಶಕ್ಕೆ ಪಡೆಯಲಾಗಿದೆ. ಒಂದುವರೆ ಲಕ್ಷ ಹಣ 1.2 ಕೆಜಿ ಚಿನ್ನವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಯಮಕನಮರಡಿ ಪೊಲೀಸರ ಕಾರ್ಯವೈಖರಿಗೆ ಎಸ್ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








