ಚಿಕ್ಕಮಗಳೂರು : ನಿನ್ನೆ ವಿಜಯಪುರದಲ್ಲಿ ಮುಸುಕು ದಾರಿ ಗ್ಯಾಂಗ್ ಒಂದು ಒಂಟಿ ಮನೆಗೆ ನುಗ್ಗಿ ಮನೆಯ ಮಾಲೀಕ ಹಾಗೂ ಆತನ ಪತ್ನಿಯ ಮೇಲೆ ಅವಾರ್ಡ್ನಿಂದ ಹಲ್ಲೆ ನಡೆಸಿ ದರೋಡಿಗೆ ಯತ್ನಿಸಿದ್ದ ಘಟನೆ ನಡೆದಿತ್ತು. ಇದೀಗ ಅಂತದ್ದೇ ಮುಸುಗು ದಾರಿ ಗ್ಯಾಂಗ್ ಒಂದು ಚಿಕ್ಕಮಂಗಳೂರಲ್ಲಿ ಆಕ್ಟಿವ್ ಆಗಿದ್ದು ಮನೆಗೆ ನುಗ್ಗಿ ಹಣ ಚಿನ್ನ ದೋಚಿ ಪ್ರಾದಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಮಗಳೂರು ಬಳಿ ನಡೆದಿದೆ.
ಹೌದು ಚಿಕ್ಕಮಂಗಳೂರಲ್ಲಿ ಖತರ್ನಾಕ್ ಗ್ಯಾಂಗ್ ಆಕ್ಟಿವ್ ಆಗಿದ್ದು, ಮನೆಯಲಿದ್ದ ವಸ್ತುಗಳನ್ನು ದೋಚಿ ಕಳ್ಳರು ಇದೀಗ ಪರಾರಿ ಆಗಿದ್ದಾರೆ. ಚಿನ್ನ ನಗದು ದೋಚಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.ಚಿಕ್ಕಮಂಗಳೂರು ತಾಲೂಕಿನ ಹಿರೇಮಗಳೂರು ಗ್ರಾಮದ ಮನೆಯಲ್ಲಿ ಖದೀಮರು ಕನ್ನ ಹಾಕಿದ್ದಾರೆ. ರಾಮಮ್ಮ ಎಂಬುವರ ಮನೆಯಲ್ಲಿ ನಗದು ಚಿನ್ನ ಬೆಳ್ಳಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಳ್ಳತನಕ್ಕೂ ಮೊದಲು ಮನೆಯ ಸುತ್ತಲೂ ಇದ್ದಂತಹ ಸಿಸಿಟಿವಿ ಕ್ಯಾಮೆರಾ ಗಳನ್ನು ಒಡೆದು ಹಾಕಿದ್ದಾರೆ ಎನ್ನಲಾಗಿದೆ.