ನವದೆಹಲಿ : ಇಸ್ರೇಲ್ ಇರಾನ್ ಯುದ್ಧದ ಬಳಿಕ ಭಾರತದ ಬಂದರಿಗೆ ಮೊದಲ ಬಾರಿಗೆ ಭಾರತದ ಬಂದರಿಗೆ ತೈಲನೌಕೆ ಆಗಮಿಸಿದೆ ಜಲಸಂಧಿಯಿಂದ ಈ ಒಂದು ತೈಲನೌಕೆ ಬಂದಿದೆ.
ಹೊರ್ಮೊಜ್ ಜಲಸಂಧಿಯಿಂದ ಮುಂಬೈ ಬಂದರಿಗೆ ತೈಲ ನೌಕೆ ಆಗಮಿಸಿದೆ. ಮಾರ್ಚ್ 8ರವರೆಗೆ ಜಲಸಂಧಿಯಲ್ಲಿ ಈ ಒಂದು ತೈಲ ನೌಕೆ ಸಿಲುಕಿತ್ತು. ಹರ್ಮೋಜ್ ಜಲಸಂಧಿ ಬಂದ್ ಆಗಿದ್ದರಿಂದ ತೈಲ ನೌಕೆ ಸಿಲುಕಿತ್ತು. ಮಾರ್ಚ್ 9 ರಂದು ಹೊರಟಿದ್ದ ಭಾರತದ ತೈಲ ನೌಕೆ ಇದೀಗ ಮುಂಬೈ ತಲುಪಿದೆ.
ಇರಾನ್ ಇಸ್ರೇಲ್ ಯುದ್ಧದ ನಡುವೆ ಹಾರ್ಮೋನ್ಸ್ ಜಲಸಂಧಿಯಲ್ಲಿ ಭಾರತೀಯ ತೈಲ ನೌಕೆ ಸಿಲುಕಿತ್ತು. ಒಂದು ವೇಳೆ ಯಾವುದೇ ಹಡಗುಗಳನ್ನು ಅಲ್ಲಿಂದ ತೆಗೆದುಕೊಂಡು ಹೋದರೆ ನಡುವೆಯೇ ದಾಳಿ ಮಾಡಿ ಧ್ವಂಸಗೊಳಿಸಲಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿತ್ತು. ಆದರೆ ಇದೀಗ ಭಾರತಕ್ಕೆ ಅತಿ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಂತಾಗಿದೆ.
ಪ್ರಮುಖ ಅಂಶಗಳು:
ಸುರಕ್ಷಿತ ಸಂಚಾರ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯಿದ್ದರೂ, ಅಂತರಾಷ್ಟ್ರೀಯ ಜಲಮಾರ್ಗಗಳಲ್ಲಿ ತೈಲ ಸಾಗಾಣಿಕೆ ಪುನರಾರಂಭಗೊಂಡಿರುವುದು ಭಾರತದ ಇಂಧನ ಭದ್ರತೆಗೆ ಸಮಾಧಾನ ತಂದಿದೆ.
ಭಾರತದ ಪೂರೈಕೆ ಜಾಲ : ಪಶ್ಚಿಮ ಏಷ್ಯಾದ ದೇಶಗಳಿಂದ ಭಾರತಕ್ಕೆ ಕಚ್ಚಾ ತೈಲದ ಸರಬರಾಜು ಸ್ಥಗಿತಗೊಳ್ಳಬಹುದು ಎಂಬ ಆತಂಕವಿತ್ತು. ಆದರೆ ಈ ನೌಕೆಯ ಆಗಮನವು ಪೂರೈಕೆ ಜಾಲ ಸುಸ್ಥಿತಿಯಲ್ಲಿದೆ ಎಂಬುದನ್ನು ಸಾಬೀತುಪಡಿಸಿದೆ.
ಆರ್ಥಿಕ ಪರಿಣಾಮ : ತೈಲ ಆಮದು ಸುಗಮವಾಗುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರಿಕೆಯಾಗದಂತೆ ತಡೆಯಲು ಸಹಕಾರಿಯಾಗಲಿದೆ.








