ಮಂಗಳೂರು : ನಿನ್ನೆ ರಾತ್ರಿ ಮಂಗಳೂರಿನಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಲಾಂಗು ಮಚ್ಚುಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಅದರ ಬೆನ್ನಲ್ಲೇ ಇಂದು ಮಂಗಳೂರು ಸುತ್ತಮುತ್ತ ಭಾಗದಲ್ಲಿ ಮೂವರ ಮೇಲೆ ಚಾಕುವಿನಿಂದ ದಾಳಿ ನಡೆಸಲಾಗಿತ್ತು. ಇದೀಗ ಮಂಗಳೂರಿನಲ್ಲಿ ಮತ್ತೋರ್ವ ಯುವಕನ ಮೇಲೆ ತಲ್ವಾರ್ ನಿಂದ ದಾಳಿಗೆ ಯತ್ನ ನಡೆದಿದೆ.
ಹೌದು ಮಂಗಳೂರಿನಲ್ಲಿ ಮತ್ತೆ ಯುವಕನೋರ್ವನ ಮೇಲೆ ದಾಳಿಗೆ ಯತ್ನಿಸಲಾಗಿದ್ದು, ಪಂಜಿಮೊಗೇರು ಬಳಿ ತಲ್ವಾರ್ ನಿಂದ ದುಷ್ಕರ್ಮಿಗಳು ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರು ದುಷ್ಕರ್ಮಿಗಳು ತಲ್ವಾರ್ ಹಿಡಿದು ಯುವಕನನ್ನು ಅಟ್ಟಾಡಿಸಿದ್ದಾರೆ. ತಲ್ವಾರ್ ಬೀಸಿದ ತಕ್ಷಣ ಯುವಕ ಬೈಕ್ ಹತ್ತಿ, ಎಸ್ಕೇಪ್ ಆಗಿದ್ದಾನೆ. ಮಂಗಳೂರು ಹೊರವಲಯದಲ್ಲಿರುವ ಪಂಜಿಮೊಗೆರೆ ಬಳಿ ಈ ಒಂದು ಘಟನೆ ನಡೆದಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.