ಮೈಸೂರು : ಸದ್ಯ ರಾಜ್ಯದಲ್ಲಿ ರೈತರ ಜಮೀನಿನ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ವಿಚಾರವಾಗಿ ಇತ್ತೀಚಿಗೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವಿರಕ್ತ ಮಠ ಕೂಡ ವಕ್ಫ್ ಆಸ್ತಿಗೆ ಸಿಗದೆ ಎಂದು ಹೇಳಲಾಗುತ್ತಿತ್ತು. ಇದೀಗ ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣದ ಶ್ರೀಚಿಕ್ಕಮ್ಮ ಚಿಕ್ಕದೇವಿ ದೇಗುಲವಿರುವ ಜಾಗ ಕೂಡ ವಕ್ಫ್ ಆಸ್ತಿಗೆ ಸೇರಿದ್ದು ಎಂದು ನಮೂದಾಗಿದೆ.
ಹೌದು ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಗ್ರಾಮದಲ್ಲಿರುವ ದೇಗುಲವಿರುವ ೬ ಗುಂಟೆ ಜಮೀನು ವಕ್ಫ್ ಆಸ್ತಿ ಎಂದು ನಮೂದಾಗಿದೆ.ಮಹದೇವಪುರ ಗ್ರಾಮದ ಶ್ರೀಚಿಕ್ಕಮ್ಮ ಚಿಕ್ಕದೇವಿ ದೇಗುಲದ ೬ ಗುಂಟೆ ಜಾಗ ಇದೀಗ ಬಂಜರು ವಕ್ಫ್ ಆಸ್ತಿ ಎಂದು ಆರ್‌ಟಿಸಿಯಲ್ಲಿ ನಮೂದಾಗಿದೆ. ಗ್ರಾಮಸ್ಥರ ಮನೆ ದೇವರು ಹಾಗೂ ದೇಗುಲದ ಮೇಲೂ ವಕ್ಫ್ ಬೋರ್ಡ್ ಕಣ್ಣು ಹಾಕಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಕಲ್ಲು ತೂರಾಟ
ಇನ್ನು ಇದೆ ವಕ್ಫ್ ವಿಚಾರವಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ಕೆಲವರು ನಮ್ಮ ಜಾಗ ವಕ್ಫ್ ಆಸ್ತಿಗೆ ಸೇರಿದೆ ಎಂದು ಹೆದರಿಕೊಂಡು ಮನೆಯನ್ನು ಖಾಲಿ ಮಾಡಿಸುತ್ತಾರೆ ಎಂದು ಮುಸ್ಲಿಂ ಮುಖಂಡರ ಮೇಲೆ ಕಲ್ಲುತೂರಾಟ ನಡೆಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಇವರಿಗೆ ಗಾಯವಾಗಿದ್ದು 15 ಜನರನ್ನು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹಾವೇರಿ ಎಸ್ ಪಿ ಅಂಶಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.