ಬೆಂಗಳೂರು : ಈಗಾಗಲೇ ಮೆಟ್ರೋ ಪ್ರಯಾಣ ಟಿಕೆಟ್ ದರ ಹೆಚ್ಚಳ ಮಾಡಿದ್ದಕ್ಕೆ ಸಾರ್ವಜನಿಕರಿಂದ ತೀವ್ರವಾದ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿನೇ ಟಿಕೆಟ ದರ ಏರಿಕೆ ಮಾಡಿ ಇದೀಗ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತ ನಾಟಕ ಮಾಡುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ ಇದರ ಬೆನ್ನಲ್ಲೇ ಬಿಎಂಆರ್‌ಸಿಎಲ್ ಅಧಿಕಾರಿಗಳು ಪಾಸ್ ನಲ್ಲಿ ಹಗಲು ದರೋಡೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಹೌದು ನಮ್ಮ ಮೆಟ್ರೋ ಪ್ರಯಾಣಿಕರಿಂದ ಇದೀಗ ಸುಲಿಗೆ ಮಾಡುತ್ತಿದೆ. ಪಾಸ್ ಗಳ ಮೂಲಕ ಬಿಎಮ್ಆರ್‌ಸಿಎಲ್ ಅಧಿಕಾರಿಗಳು ಸುಲಿಗೆಗೆ ಇಳಿದಿದ್ದಾರೆ ಎನ್ನಲಾಗಿದೆ. ಪ್ರಯಾಣಿಕರ ಬಳಿ ವಸೂಲಿ ಮಾಡುತ್ತಿರುವ ಆರೋಪ ಇದೀಗ ಕೇಳಿ ಬಂದಿದೆ. BMRCL ಪಾಸ್ ಗಳ ಹಗಲು ದರೋಡೆ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ.
ಮೆಟ್ರೋ ದಿನದ ಪಾಸಿಗೆ ಈ ಮೊದಲು 150 ಇತ್ತು 3 ದಿನದ ಪಾಸ್ 350 ಇತ್ತು. 5 ದಿನದ ಪಾಸಿಗೆ 550 ರೂಪಾಯಿ ಇತ್ತು. ಪ್ರಯಾಣದರ ಹೆಚ್ಚಳ ಬಳಿಕ ಮೆಟ್ರೋ ಪಾಸ್ ಗಳ ದರ ಕೂಡ ದುಪ್ಪಟ್ಟು ಆಗಿದೆ. ಈಗ ಒಂದು ದಿನದ ಪಾಸ್ದರ 150 ರಿಂದ 300 ಏರಿಕೆ ಮಾಡಿದ್ದು ಮೂರು ದಿನದ 350 ರಿಂದ 600 ಏರಿಕೆಯಾಗಿದೆ ಅಲ್ಲದೆ ಐದು ದಿನಗಳ ಪಾಸ್ 550 ರಿಂದ 800 ರೂಪಾಯಿವರೆಗೆ ಪಾಸ್ ದರ ಏರಿಕೆ ಮಾಡಿದ್ದು ಬಿಎಂಆರ್‌ಸಿಎಲ್ ಹಗಲು ದರೋಡೆ ಮಾಡುತ್ತಿದೆ.
ಪಾಸ್ ಗಳ ಮೊದಲಿನ ದರ
1 ದಿನಕ್ಕೆ = 150
3 ದಿನಕ್ಕೆ = 350
5 ದಿನಕ್ಕೆ = 550
ಪರಿಷ್ಕೃತ ದರ
1 ದಿನಕ್ಕೆ = 300
3 ದಿನಕ್ಕೆ = 600
5 ದಿನಕ್ಕೆ = 800