ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಪ್ಲಾಸ್ಟಿಕ್ ನಲ್ಲಿ ಇಡ್ಲಿ ತಯಾರಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ರಾಜ್ಯ ಸರ್ಕಾರ ಪ್ಲಾಸ್ಟಿಕ್ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಅದಾದ ಬಳಿಕ ಮಹಿಳೆಯರು ತಮ್ಮ ಸೌಂದರ್ಯಕ್ಕೆ ಬಳಸುವ ಲಿಪ್ಸ್ಟಿಕ್, ಲಿಪ್ ಕೇರ್ ಹಾಗೂ ಕಾಸ್ಮೆಟಿಕ್ ಗಳಲ್ಲಿ ಕೂಡ ಹಲವು ಪರಿಣಾಮಕಾರಿ ಅಂಶಗಳು ಪತ್ತೆಯಾಗಿವೆ.
ಅಲ್ಲದೆ ಟ್ಯಾಟೂನಿಂದ ಚರ್ಮರೋಗ ಬರುವ ಸಾಧ್ಯತೆ ಇದೆ ಎಂದು ಶೀಘ್ರದಲ್ಲಿ ಅದನ್ನು ಕೂಡ ನಿಷೇಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಇದೀಗ ಮೆಹಂದಿಯಲ್ಲಿ ಕೂಡ ಕೃತಕ ಬಣ್ಣ ಬಳಸಿರುವ ಆರೋಪ ಕೇಳಿ ಬರುತ್ತಿದೆ. ಹೌದು ಲಿಪ್ಸ್ಟಿಕ್ ಟ್ಯಾಟು ಬಳಿಕ ಇದೀಗ ಮೆಹಂದಿಯು ಡೆಂಜರ್ ಎನ್ನಲಾಗುತ್ತಿದೆ. ಮದರಂಗಿಗೆ ಅಪಾಯಕಾರಿ ಕಲರ್ ಬಳಕೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಕೈಯಲ್ಲಿ ದೀರ್ಘಕಾಲ ಉಳಿಯಲು ಕೃತಕ ಬಣ್ಣ ಬಳಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಮೆಹಂದಿಯಲ್ಲಿ ಕೃತಕವನ್ನು ಬಳಸುತ್ತಿರುವ ಕುರಿತು ದೂರು ಬಂದಿದೆ. ಹಾಗಾಗಿ ಬೆಂಗಳೂರಿನಲ್ಲಿ ಸ್ಯಾಂಪಲ್ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಇದೀಗ ಸಜ್ಜಾಗಿದೆ. ಈ ಮೂಲಕ ರಾಜ್ಯದಲ್ಲಿ ಶೀಘ್ರವೇ ಎಲೆಕ್ಟ್ರಿಕ್ ಲಿಪ್ ಕೇರ್ ಕಾಸ್ಮೆಟಿಕ್ ಹಾಗೂ ಟ್ಯಾಟೂ ಸೇರಿದಂತೆ ಮೆಹಂದಿ ಬಳಸುವುದಕ್ಕೂ ಹಲವು ಕಠಿಣ ಕಾನೂನು ಜಾರಿಗೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.