ಬೆಂಗಳೂರು : ಯುಜಿಸಿ ಪಠ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದಲೂ ವಿರೋಧ ವ್ಯಕ್ತವಾಗಿದ್ದು, ಕೇರಳ ಬಳಿಕ ರಾಜ್ಯದಲ್ಲಿಯೂ ಯುಜಿಸಿ ಪಠ್ಯಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ.
ಈ ವಿಚಾರವಾಗಿ ಬೆಂಗಳೂರಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಮಾಹಿತಿ ನೀಡಿದ್ದು, ಪಠ್ಯಕ್ರಮ ರಚನೆಯಲ್ಲಿ ಯುಜಿಸಿ ತೋರಿಸುತ್ತಿದೆ. ಪಠ್ಯಕ್ರಮ ಒಪ್ಪುವುದಿಲ್ಲ ಅಂತ ಸಚಿವ ಎಂ.ಸಿ ಸುಧಾಕರ್ ಹೇಳಿಕೆ ನೀಡಿದ್ದಾರೆ. ಯುಜಿಸಿ ಪಠ್ಯ ರೂಪಿಸುವ ಹಕ್ಕಿಲ್ಲ. ಕೇವಲ ಪಠ್ಯಕ್ರಮದ ಚೌಕಟ್ಟನ್ನು ಮಾತ್ರ ನೀಡಬೇಕು. ಹೀಗಾಗಿ ಯುಜಿಸಿ ಕರಡು ಪ್ರತಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.
ಯುಜಿಸಿ ಒಂದು ನಿಯಂತ್ರಣ ಸಂಸ್ಥೆ ಅಷ್ಟೇ ಯೋಚಿಸಿ ಪಠ್ಯಕ್ರಮ ರೂಪಿಸಲು ಅಧಿಕಾರ ಹೊಂದಿಲ್ಲ. ಪಠ್ಯಕ್ರಮ ರೂಪಿಸುವ ಅಧಿಕಾರ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಗೆ ಇದೆ. ಯುಜಿಸಿಯ ಪಠ್ಯಕ್ರಮ ಕರ್ಡನ್ನು ಅಧ್ಯಯನ ಮಾಡಲು ಸಮಿತಿ ರಚನೆ ಮಾಡಲಾಗಿದ್ದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ತಜ್ಞರ ಸಮಿತಿ ರಚನೆಯಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಮಾಹಿತಿ ನೀಡಿದರು.