ಬೆಂಗಳೂರು : ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸಿಎಂ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರ ನೀಡುವ ಮೂಲಕ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಕೂಡ ಕೆ.ಎನ್ ರಾಜಣ್ಣ ಅವರ ರಾಜೀನಾಮೆ ಅಂಗೀಕರಿಸಿದ್ದು ಕೆಲವೇ ಕ್ಷಣಗಳಲ್ಲಿ ರಾಜ್ಯಪಾಲರಿಗೂ ರಾಜಿನಾಮೆ ಅಂಗೀಕಾರ ಪತ್ರ ಕಳುಹಿಸಲಿದ್ದಾರೆ.
ಹೌದು ಸಚಿವ ಏನ್ ರಾಜಣ್ಣ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತಷ್ಟು ಸಚಿವರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಸಚಿವರ ಆಪ್ತ ವಲಯದಲ್ಲಿ ಕೇಳಿ ಬರುವಂತಹ ಮಾತುಗಳಾಗಿದ್ದು, ಇನ್ನಷ್ಟು ಸಚಿವರ ರಾಜೀನಾಮೆ ಸಾಧ್ಯತೆ ದಟ್ಟವಾಗಿದೆ. ಎಷ್ಟು ಜನ ರಾಜೀನಾಮೆ ಕೊಡ್ತಾರೆ ಇವತ್ತೇ ಕೊಡುತ್ತಾರೆ ಅಥವಾ ಹಂತ ಹಂತವಾಗಿ ರಾಜೀನಾಮೆ ಪಡೆಯಲಾಗುತ್ತಾ ಮಾಹಿತಿ ತಿಳಿದು ಬರಬೇಕಿದೆ.
ಹೀಗಾಗಿ ಸಾಕಷ್ಟು ಬೆಳವಣಿಗೆ ಆಗುತ್ತಿದೆ. ಯಾವ್ಯಾವ ಸಚಿವರಿಗೆ ಕೊಕ್ ನೀಡಲಾಗುತ್ತದೆ ಎಂದು ಸಾಕಷ್ಟು ಚರ್ಚೆ ನಡೆಯುತ್ತಿದೆ. ಸುಮಾರು ಆರು ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎಂದು ರಾಹುಲ್ ಗಾಂಧಿ ಈ ಹಿಂದೆ ಸೂಚನೆ ಕೊಟ್ಟಿದ್ದರು. ಆದರೆ ಆ ಕುರಿತು ಇದುವರೆಗೂ ಚರ್ಚೆ ಮಾಡಿರಲಿಲ್ಲ. ಆದರೆ ರಾಜಣ್ಣ ಅವರ ರಾಜೀನಾಮೆ ಆಗುತ್ತಿದಂತೆ, ಈ ಸಂದರ್ಭದಲ್ಲಿ ಎಲ್ಲಾ ಸಚಿವರ ರಾಜೀನಾಮೆ ಪಡೆಯುವ ಮೂಲಕ ಮತ್ತಷ್ಟು ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.