ಮಂಗಳೂರು : ಕಳೆದ ಒಂದು ಗಂಟೆಯ ಹಿಂದೆ ಗದಗ ಜಿಲ್ಲಾಡಳಿತ ಭವನ ಸ್ಪೋಟಿಸುವುದಾಗಿ ಕಿಡಿಗೇಡಿಗಳಿಂದ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಅದರ ಬೆನ್ನಲ್ಲೇ ಇದೀಗ ಮಂಗಳೂರು ಆರ್‌ಟಿಓ ಕಚೇರಿ ಸ್ಫೋಟಿಸುವುದಾಗಿ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ.
aarna aswin sekar@outlook.com ನಿಂದ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದಿದೆ ಪಾಕಿಸ್ತಾನ ಐಎಸ್ಐ, ಎಲ್ ಟಿ ಟಿ ಇ ಯಿಂದ ರಿಮೋಟ್ ಆಪರೇಷನ್ ಮಾಡಲಾಗುತ್ತೆ ಎಂದು ಉಲ್ಲೇಖಿಸಿ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ ತಮಿಳುನಾಡು ರಾಜಕೀಯ ವಿಚಾರವಾಗಿ ಕಿಡಿಗೇಡಿಗಳು ಇ-ಮೇಲ್ ಸಂದೇಶ ಕಳುಹಿಸಿದ್ದಾರೆ. ಸಜ್ಜನ್ ಹೈದರ್ ಪಿಎಎಫ್ ಗೆ ಜಿಂದಾಬಾದ್ ಎಂದು ಘೋಷಣೆ ಇದ್ದು, ತಮಿಳುನಾಡಿನ ಐಪಿಎಸ್ ಅಧಿಕಾರಿಗಳ ಹೆಸರು ಉಲ್ಲೇಖಿಸಿ ಇ-ಮೇಲ್ ಕಳುಹಿಸಿದ್ದಾರೆ.








