ಕಲಬುರ್ಗಿ : ಕಲ್ಬುರ್ಗಿಯಲ್ಲಿ ಇದೀಗ ಆರ್ ಎಸ್ ಎಸ್ ವಿರುದ್ಧ ಸಮರ ಮುಂದುವರೆದಿದೆ. ಜಿಲ್ಲೆಯ ಚಿತ್ತಾಪುರದಲ್ಲಿ ಅಷ್ಟೇ ಅಲ್ಲದೆ ಇನ್ನು ಎರಡು ಕಡೆಗೆ ಪಥ ಸಂಚಲನಕ್ಕೆ ಬ್ರೇಕ್ ಹಾಕಲಾಗಿದೆ. ಕಲಬುರ್ಗಿ ಜಿಲ್ಲೆಯ ಸೇಡಂ ಮತ್ತು ಕುಮ್ಮನಶಿರಸಿಗಿಯಲ್ಲಿ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಅವಕಾಶ ನಿರಾಕರಿಸಲಾಗಿದೆ.
ಕಲ್ಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಈ ವಿಚಾರವಾಗಿ ನೆನ್ನೆ ದೊಡ್ಡ ಹೈಡ್ರಾಮಾನೆ ನಡೆದಿದ್ದು, ನಿರ್ಬಂಧದ ನಡುವೆಯೂ ಕಾರ್ಯಕರ್ತರು ಪತಸಂಚಲನಕ್ಕೆ ಹೊರಟಿದ್ದರು. ಸೇಡಂ ಪಟ್ಟಣದಲ್ಲಿ ಮತ ಸಂಚಲನಕ್ಕೆ ಹೊರಟಿದ್ದ ಗಣ ವೇಷಧರಿಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ದೊಡ್ಡ ಹೈಡ್ರಾಮಾವೆ ಆಗಿದೆ ಹೀಗಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ಆಕ್ರೋಶ ಹೆಚ್ಚಾಗಿದ್ದು, ಇದಕ್ಕೆಲ್ಲ ಸಚಿವ ಪ್ರಿಯಾಂಕ ಖರ್ಗೆ ಒತ್ತಡವೇ ಕಾರಣ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.