ಶಿವಮೊಗ್ಗ : ಕಳೆದ ವರ್ಷ ಬಳ್ಳಾರಿ ಬೆಳಗಾವಿ ಹಾಗೂ ರಾಯಚೂರಿನಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಈ ಒಂದು ಬಾಣಂತಿಯರ ಮರಣ ಮೃದಂಗ ಮುಂದುವರೆದಿದ್ದು ಶಿವಮೊಗ್ಗದ ಮೆಗನ್ ಆಸ್ಪತ್ರೆಯಲ್ಲಿ ಬಾಣಂತಿ ಸಾವಾಗಿದೆ.ನಿನ್ನೆ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಬಾಣಂತಿಯ ಸಾವಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಕವಿತಾ ಎನ್ನುವ ಬಾಣಂತಿಯ ಸಾವಾಗಿದೆ. ಎರಡು ದಿನದ ಹಿಂದೆ ಕವಿತಾ ಹೆರಿಗೆಗಾಗಿ ಶಿವಮೊಗ್ಗದ ಮೆಗ್ನ ಆಸ್ಪತ್ರೆಗೆ ದಾಖಲಾಗಿದ್ದರು.ನಿನ್ನೆ ಬೆಳಿಗ್ಗೆ 8 ಗಂಟೆಗೆ ಹೆಣ್ಣು ಮಗುವಿಗೆ ಕವಿತಾ ಜನ್ಮ ನೀಡಿದ್ದಾರೆ. ಹೆರಿಗೆ ಬಳಿಕ ಕವಿತಾಗೆ ದಿಢೀರ್ ರಕ್ತ ಹೆಪ್ಪುಗಟ್ಟಿದೆ.
ಹೆರಿಗೆ ಬಳಿಕ ಕವಿತಾ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಬಾಣಂತಿ ಕವಿತಾ ಸಾವು ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕವಿತಾ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಬಾಣಂತಿ ಸಾವಿನ ಬಗ್ಗೆ ಕುಟುಂಬಸ್ಥರು ಯಾವುದೇ ದೂರು ನೀಡಿಲ್ಲ.