ಹುಬ್ಬಳ್ಳಿ : ಬಳ್ಳಾರಿಯ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಆರು ಜನ ಬಾಣಂತಿಯರು ಸಾವನ್ನಪ್ಪಿದ್ದರು. ಈ ಒಂದು ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ಅಲ್ಲದೆ ಇತ್ತೀಚಿಗೆ ಬೆಳಗಾವಿಯಲ್ಲಿ ಕಳೆದ ಆರು ತಿಂಗಳಲ್ಲಿ 29 ಬಾಣಂತಿಯರು ಹಾಗೂ 322 ಶಿಶುಗಳು ಮೃತಪಟ್ಟಿರುವ ಸಂಗತಿ ಬಯಲಾಗಿತ್ತು. ಇದೀಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೂಡ ಬಾಣಂತಿಯರ ಹಾಗೂ ಶಿಶುಗಳ ಸಾವಾಗಿರುವುದು ಬೆಳಕಿಗೆ ಬಂದಿದೆ.
ಹೌದು ಈ ಕುರಿತಂತೆ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ್ ಮಾಧ್ಯಮಗಳ ಜೊತೆ ಮಾತನಾಡಿ, ಜನವರಿಯಿಂದ ಈವರೆಗೆ 33 ಗರ್ಭಿಣಿಯರು, 148 ಶಿಶುಗಳ ಸಾವಾಗಿದೆ. ಬೇರೆ ಬೇರೆ ಕಾರಣಗಳಿಂದ ಗರ್ಭಿಣಿಯರು, ನವಜಾತ ಶಿಶುಗಳ ಸಾವಾಗಿದೆ, ಆದರೆ ಡ್ರಗ್ ಡಿಯಾಕ್ಟ್ನಿಂದ ಯಾರೂ ಮೃತಪಟ್ಟಿಲ್ಲ. ನ್ಯಾಷನಲ್ ಲೇವಲ್ ಡೆತ್ ರೇಟ್ ಹೇಗಿದೆ, ಹಾಗೆ ಹುಬ್ಬಳ್ಳಿ ಕಿಮ್ಸ್ನಲ್ಲಿ ಡೆತ್ ರೇಟ್ ಶೇಕಡ 3 ರಿಂದ 4 ರಷ್ಟಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಿಮ್ಸ್ನಲ್ಲಿ ಡ್ರಗ್ ರಿಯಾಕ್ಟ್ನಿಂದ ಮೃತಪಟ್ಟಿರುವ ವರದಿಯಾಗಿಲ್ಲ, ಆದರೂ ಮುಂಜಾಗ್ರತಾ ಕ್ರಮವಾಗಿ ಸಮಿತಿ ರಚನೆ ಮಾಡಿದ್ದೇವೆ. ಸೆಪ್ಟೆಂಬರ್ನಲ್ಲೂ ಅದೇ ಬ್ರ್ಯಾಂಡ್ನ ಸಲಾಯಿನ್ ಬಳಸಲಾಗಿದೆ. ಎಲ್ಲಾ ವಾರ್ಡ್ಗಳಲ್ಲಿರುವ ರೋಗಿಗಳಿಗೆ ಸಲಾಯಿನ್ ನೀಡಲಾಗಿತ್ತು. ಸಲಾಯಿನ್ ಬಳಕೆಯಿಂದ ಯಾವ ರೋಗಿಯೂ ಮೃತಪಟ್ಟಿಲ್ಲ.ಯಾರಿಗಾದರೂ ಸಮಸ್ಯೆ ಆಗಿದ್ಯಾ ಎಂಬ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸಮಿತಿ ರಚಿಸಲಾಗಿದೆ ಎಂದಿದ್ದಾರೆ.