ಬೆಂಗಳೂರು : ಬಿಗ್ ಬಾಸ್ ಸೀಸನ್ 12 ಶುರುವಾಗಿನಿಂದ ಒಂದಿಲ್ಲೊಂದು ಸಮಸ್ಯೆಗಳು ಇದರಾಗುತ್ತಲೇ ಇವೆ . ಮೊದಲು ಅಶ್ವಿನಿ ಗೌಡ ರಕ್ಷಿತಾ ಕುರಿತು ಹೇಳಿಕೆ ನೀಡಿದ ವಿರುದ್ಧ ದೂರು ದಾಖಲಾಗಿದ್ದಾರೆ ಇನ್ನೊಂದು ಕಡೆ ಮಹಿಳಾ ಸ್ಪರ್ಧಿಯನ್ನು ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಆರೋಪ ಸಂಬಂಧ ಗಿಲ್ಲಿ ನಟ ವಿರುದ್ಧ ದೂರು ದಾಖಲಾಗಿತ್ತು.
ಇದೀಗ ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ್ದರ ಕುರಿತು ಗಿಲ್ಲಿ ಅಭಿಮಾನಿಗಳು ರಿಷಾ ವಿರುದ್ಧ ದೂರು ದಾಖಲಿಸಿದ್ದಾರೆ. ಹೌದು ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿರುವ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ವಿರುದ್ಧ ದೂರು ದಾಖಲಾಗಿವೆ. ಇದೀಗ ಮತ್ತೋರ್ವ ಸ್ಪರ್ಧಿ ವಿರುದ್ಧ ದೂರು ದಾಖಲಾಗಿದೆ. ಹಳೆಯ ಪ್ರಕರಣವೊಂದು ಮತ್ತೆ ಜೀವ ಪಡೆದುಕೊಂಡಿದ್ದು, ಜಿಲ್ಲಾ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಪರ್ಧಿ ಗಿಲ್ಲಿ ನಟ ಅವರ ಮೇಲೆ ಹಲ್ಲೆ ಸಂಬಂಧ ರಿಷಾ ಗೌಡ ವಿರುದ್ಧ ದೂರು ದಾಖಲಾಗಿದೆ. ಕಾರ್ಯಕ್ರಮದ ಆಯೋಜಕರು ರಿಷಾ ಗೌಡ ವಿರುದ್ಧ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗಿಲ್ಲಿ ನಟ ಅಭಿಮಾನಿಗಳು ದೂರು ದಾಖಲಿಸಿದ್ದು, ರಿಷಾ ವಿರುದ್ಧ ಕ್ರಮ ಜರುಗಿಸುವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.








