ಬೆಂಗಳೂರು : ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದು, ನಿನ್ನೆ ರಾಯ್ ಅವರು ತಮ್ಮ ಕಚೇರಿಯಲ್ಲಿ 20 ನಿಮಿಷ ಚೇಂಬರ್ ಗೆ ಹೋಗಿ ಲಾಕ್ ಮಾಡಿ ಕೊಂಡಿದ್ದಾರೆ. ಬಳಿಕ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ ಎಂದು ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಗಿಲು ಒಡೆದು ನೋಡಿದಾಗ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಡಿಸೆಂಬರ್ ನಲ್ಲಿ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಲು ನಿರ್ಧಾರ ಮಾಡಿದ್ದು, ಫೆಬ್ರವರಿ 4ರ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಸುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಿಜೆ ರಾಯ್ ಅವರನ್ನು ಕರೆದಿದ್ದಾರೆ.
ಈ ಹಿನ್ನೆಲೆ ಕಳೆದ ಮೂರು ದಿನಗಳ ಹಿಂದೆ ಸಿಜೆ ರಾಯ್ ದುಬೈ ನಿಂದ ಬೆಂಗಳೂರಿಗೆ ಬಂದಿದ್ದಾರೆ. ಅಧಿಕಾರಿಗಳು ಅವರ ಆಫೀಸಿಗೆ ಹೋಗಿ ಅವರ ಜೊತೆ ಚರ್ಚೆ ಮಾಡಿ ಸ್ಟೇಟ್ಮೆಂಟ್ ತಗೊಳ್ಳೋದಕ್ಕೆ ನಿರ್ಧರಿಸಿದ್ದಾರೆ. ಈ ವೇಳೆ 20 ನಿಮಿಷ ಬರ್ತೀನಿ ಅಂತ ಚೇಂಬರ್ ಗೆ ತೆರಳಿದ್ದಾರೆ. ಆಗ ಬಾಗಿಲು ಹೊಡೆದು ನುಡಿದಾಗ ಅವರು ಆತ್ಮಹತ್ಯೆ ಮಾಡಿಕೊಡಿರುವುದು ಗಮನಕ್ಕೆ ಬಂದಿದೆ.
ಇದನ್ನು ಹೊರತುಪಡಿಸಿ ಯಾವ ವಿಚಾರಕ್ಕೆ ಆತ್ಮಾತ ಮಾಡಿಕೊಂಡಿದ್ದಾರೆ ಎನ್ನುವುದರ ಕುರಿತು ಇಲಾಖೆಗೆ ಪ್ರಾಥಮಿಕ ತನಿಖೆಗೆ ಸೂಚಿಸಿದ್ದೇನೆ ವರದಿ ಬಂದಮೇಲೆ ಎಲ್ಲ ವಿಷಯ ಗೊತ್ತಾಗಲಿದೆ ಎಂದು ಪರಮೇಶ್ವರ್ ತಿಳಿಸಿದರು.








