ಬೆಂಗಳೂರು : ರೈತರಿಗೆ ಹೆಚ್ಚುವರಿ ಯಾಗಿ ರಾಜ್ಯ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ನೀಡಲಾಗುತ್ತಿದ್ದು, ಪ್ರತಿ ಹೆಗ್ಟಗೆ 8,000 ಬೆಳೆ ಹಾನಿ ಪರಿಹಾರ ನೀಡಲಾಗುತ್ತೆ ಎಂದು ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಬೆಳೆ ಹಾನಿ ಪರಿಹಾರ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಸಂಪುಟದ ತೀರ್ಮಾನದಿಂದ ಪ್ರಾಥಮಿಕ ಸಮೀಕ್ಷೆ ಮಾಡಿದ್ದೆವು. ಎಲ್ಲ ಇಲಾಖೆಗಳ ಸಹಕಾರದಿಂದ ಜಂಟಿ ಸಮೀಕ್ಷೆ ಮಾಡಿದ್ದೇವೆ ಈಗಾಗಲೇ ರೈತರಿಗೆ 1018 ಕೋಟಿ ಸಂದಾಯ ಆಗಿದೆ ಆದರೆ ಹೆಚ್ಚುವರಿ ಪರಿಹಾರಕ್ಕಾಗಿ ರೈತರು ಮತ್ತು ಶಾಸಕರು ಮನವಿ ಮಾಡಿದ್ದರು ಹಾಗಾಗಿ ರೈತರಿಗೆ ಹೆಚ್ಚುವರಿ ಬೆಳೆ ಹಾನಿ ಪರಿಹಾರ ನೀಡುತ್ತಿದ್ದೇವೆ ಪ್ರತಿಹಾಕ್ಟರಿಗೆ ಹೆಚ್ಚುವರಿಯಾಗಿ 8,000 ಹಣ ನೀಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ 14 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಬೆಳೆ ಪರಿಹಾರ ನೀಡಬೇಕು ಎಂದು ರಾಜ್ಯದ ರೈತರು ಆಗ್ರಹಿಸಿದ್ದರು ನಾನು ಸಹ ಕಲಬುರ್ಗಿ ಬೀದರ್ ಮತ್ತು ಯಾದಗಿರಿಗೆ ಹೋಗಿದ್ದೆ ಮೆಕ್ಕೆಜೋಳ ಕಬ್ಬು ತೊಗರಿ ಬೆಳೆ ಹೆಚ್ಚು ನಷ್ಟ ಆಗಿದೆ ಒಳ್ಳೆಯ ಮಳೆಯಾದರೂ ಕೂಡ ಬೆಳೆ ನಷ್ಟ ಆಗಿದೆ ಬೆಳೆ ಹಾನಿ ಪರಿಹಾರಕ್ಕಾಗಿ ಕೇಂದ್ರಕ್ಕೂ ಮನವಿ ಮಾಡಿದ್ದೇವೆ ಕೇಂದ್ರ ಸರ್ಕಾರ ಕೂಡ ಪರಿಹಾರ ನೀಡುವ ನಿರೀಕ್ಷೆ ಇದೆ ಇವತ್ತು 1033 ಕೋಟಿ ಹೆಚ್ಚುವರಿ ಪರಿಹಾರ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.








