ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಅಟ್ಟಿದ್ದಾರೆ. ಇನ್ನು ಈ ವಿಚಾರವಾಗಿ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ದರ್ಶನ್ ಅಭಿಮಾನಿಗಳ ವಿರುದ್ಧ ಈ ಹಿಂದೆ ಕಿಡಿ ಕಾರಿದ್ದ ನಟಿ ರಮ್ಯಾ ಅವರು ಇದೀಗ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಟ ದರ್ಶನ್ ಅರೆಸ್ಟ್ ಆಗಿರುವುದು ಒಂದು ಕಡೆ ನನಗೆ ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
ದರ್ಶನ್ ಅವರೆ ಅವರ ಲೈಫ್ ಹಾಳು ಮಾಡಿಕೊಂಡರು. ಅವರ ಹಳೆಯ ದಿನಗಳು ತುಂಬಾ ಚೆನ್ನಾಗಿತ್ತು, ದರ್ಶನ್ ಇಂಡಸ್ಟ್ರಿಗೆ ಲೈಟ್ ಮ್ಯಾನ್ ಆಗಿ ಬಂದು ಬೆಳೆದರು. ನಾನು ದರ್ಶನ್ ಜೊತೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ನಟ ದರ್ಶನ್ ಅರೆಸ್ಟ್ ಆದಾಗ ಮಿಶ್ರ ಪ್ರತಿಕ್ರಿಯೆ ಬಂತು. ದರ್ಶನ್ ಅರೆಸ್ಟ್ ಆದಾಗ ಒಂದು ಕಡೆ ಬೇಸರವು ಆಯ್ತು ಇಂಡಸ್ಟ್ರಿಗೆ ಬಂದ ವಿಚಾರವನ್ನು ನನ್ನ ಜೊತೆ ಹಂಚಿಕೊಂಡಿದ್ದರು. ಈಗ ಅವರೇ ಅವರ ಲೈಫ್ ಹಾಳು ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ನಟಿ ರಮ್ಯಾ ಅವರಿಗೆ ದರ್ಶನ್ ಅವರ ಅಭಿಮಾನಿಗಳು ಅಶ್ಲೀಲವಾಗಿ ಮೆಸೇಜ್ ಮಾಡಿದ್ದರು. ಈ ಕುರಿತು ನಟಿ ರಮ್ಯಾ ಬೆಂಗಳೂರು ಕಮಿಷನರ್ ಗೆ ದೂರು ನೀಡಿದ್ದರು. ಬಳಿಕ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಹಲವು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ಕೆಲವು ಆರೋಪಿಗಳನ್ನು ವಿಚಾರಣೆಗೆ ಕರೆದು ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ.