ಬೆಂಗಳೂರು : ನಟಿ, ಮಾಜಿ ಸಂಸದೆ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಇದೀಗ ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರು ಬೆಂಗಳೂರಿನ 4ನೇ ACJM ಕೋರ್ಟ್ ಗೆ ಒಟ್ಟು 600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಚಾರ್ಜ್ ಶೀಟ್ ನಲ್ಲಿ ಆರೋಪಿಗಳು ನಟಿ ರಮ್ಯಾಗೆ ಕಳುಹಿಸಿದ್ದ ಮೆಸೇಜ್, ವಿಡಿಯೋಗಳ ಸಮೇತ ವಿವರಿಸಲಾಗಿದೆ. ರಾಜೇಶ್ ಎಂಬ ಆರೋಪಿ ಐಶ್ವರ್ಯಾ ಎಂಬ ಅಕೌಂಟ್ ಮೂಲಕವಾಗಿ ರಮ್ಯಾಗೆ ಅಶ್ಲೀಲ ವಿಡಿಯೋ ಕಳುಹಿ ವಿಕೃತಿ ಮೆರೆದಿದ್ದ. ಹಾಗಾಗಿ ಸಿಸಿಬಿ ಪೊಲೀಸರು ಬೆಂಗಳೂರಿನ 4ನೇ ACJM ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.