ಮೈಸೂರು : ಹೊಂಬಳೆ ಸಂಸ್ಥೆಯ ಬಘೀರ ಚಿತ್ರಿಕರಣದ ಸಮಯದಲ್ಲಿ ಚಿತ್ರದಲ್ಲಿನ ಮುಖ್ಯವಾಗಿ ನಡೆಯುವ ಸನ್ನಿವೇಶದ ಬಹು ದೊಡ್ಡ ಸ್ಟಂಟ್ ಸೀನ್ ಫೈಟಿಂಗ್ ವೇಳೆ ರೋರಿಂಗ್ ಸ್ಟಾರ್ ಕನಕ ಶ್ರೀಮುರುಳಿಗೆ ಕಾಲಿಗೆ ಗಂಭೀರವಾದಂತಹ ಗಾಯಗಳಾಗಿದ್ದು ಇದೀಗ ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಘೀರ ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಗಾಯಗೊಂಡಿದ್ದಾರೆ. ಬಘೀರ ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ಸಂಧರ್ಭ ಕಾಲಿಗೆ ಪೆಟ್ಟು ಬಿದ್ದಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬಘೀರ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.
ಕಾಲಿಗೆ ಗಾಯವಾದ ತಕ್ಷಣ ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು.ಈ ಒಂದು ಬಘಿರ ಸಿನಿಮಾದಲ್ಲಿ ಅತ್ಯಂತ ದೊಡ್ಡದಾದ ಆಕ್ಷನ್ ಸೀನ್ ಇರುವುದರಿಂದ ಈ ವೇಳೆ ಶ್ರೀ ಮುರುಳಿ ಅವರಿಗೆ ಸ್ಟಂಟ್ ಮಾಡುವ ವೇಳೆ ಕಾಲಿಗೆ ಗಂಭೀರವಾದ ಗಾಯಗಳಾಗಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.