ಬೆಂಗಳೂರು : ಕ್ಯಾನ್ಸರ್ ಹಿನ್ನೆಲೆಯಲ್ಲಿ ಇತ್ತೀಚಿಗೆ ನಟ ಶಿವರಾಜ್ ಕುಮಾರ್ ಅವರು ಅಮೆರಿಕಾಗೆ ಶಸ್ತ್ರಚಿಕಿತ್ಸೆಗೆ ಎಂದು ತೆರಳಿದ್ದರು. ನಟ ಶಿವರಾಜ್ ಕುಮಾರ್ ಅವರಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ನಟ ಶಿವರಾಜಕುಮಾರ್ ಅವರು ಮಾರಕ ಕಾಯಿಲೆಯಾದ ಕ್ಯಾನ್ಸರ್ ಅನ್ನು ಗೆದ್ದಿದ್ದಾರೆ.
ಈ ಕುರಿತು ಅವರ ಪತ್ನಿ ಗೀತಾ ಅವರು ಮಾಹಿತಿ ಹಂಚಿಕೊಂಡಿದ್ದು, ಶಿವರಾಜಕುಮಾರ್ ಅವರ ಎಲ್ಲಾ ಹೆಲ್ತ್ ರಿಪೋರ್ಟ್ ನೆಗೆಟಿವ್ ಆಗಿದ್ದು ಕ್ಯಾನ್ಸರ್ ಫ್ರೀ ಎಂದು ವರದಿ ಬಂದಿದೆ. ಕ್ಯಾನ್ಸರ್ ಫ್ರೀ ಎಂದು ಶಿವಣ್ಣ ಪತ್ನಿ ಗೀತಾ ಶಿವರಾಜಕುಮಾರ್ ಮಾಹಿತಿ ನೀಡಿದ್ದಾರೆ ಇದೆ ವೇಳೆ ಶಿವರಾಜ್ ಕುಮಾರ್ ಹೊಸ ವರ್ಷದ ಶುಭಾಶಯಗಳು ತಿಳಿಸಿದರು. ಶಸ್ತ್ರ ಚಿಕಿತ್ಸೆ ಬಳಿಕನಟ ಶಿವರಾಜ್ ಕುಮಾರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಿಂದ ಹೊರಡುವಾಗ ನಾನು ಸ್ವಲ್ಪ ತಮೋಶನಲ್ ಆಗಿದೆ ಭಯ ಎನ್ನುವುದು ಮನುಷ್ಯನಿಗೆ ಇರುತ್ತದೆ. ಭಯಣಿಗಿಸುವ ಅಭಿಮಾನಿಗಳು ಸಹಕಲಾವಿದರು ಇದ್ದಾರೆ ಕೆಲವರು ಸ್ನೇಹಿತರು ಸಂಬಂಧಿಕರು ಡಾಕ್ಟರ್ಸ್ ಇರುತ್ತಾರೆ. ಕಿಮೋ ತೆರಪಿಯಲ್ಲಿ 45 ಸಿನಿಮಾ ಶೂಟ್ ಮಾಡಿರುವುದು ಗೀತಾ ನಿವೇದಿತಾ ಯಾವಾಗಲೂ ನನ್ನ ಬೆಂಬಲವಾಗಿ ನಿಂತಿದ್ದಾರೆ. ಯಾರು ಗಾಬರಿ ಭಯಪಡಬೇಡಿ ಎಂದು ನಟ ಶಿವಣ್ಣ ತಿಳಿಸಿದ್ದಾರೆ.