ಬೆಂಗಳೂರು: ಗೋಲ್ಡನ್ ಸ್ಟಾರ್‌ಗಣೇಶ್ ತಮ್ಮ ನಟನೆಯ ‘ನಿದ್ರಾದೇವಿ ನೆಕ್ಸ್ ಡೋರ್’ ಚಿತ್ರದಿಂದ ಕನ್ನಡದ ಬಗ್ಗೆ ಆಕ್ಷೇಪಾರ್ಹ ಮಾತು ಆಡಿದ ಗಾಯಕ ಸೋನು ನಿಗಂ ಹಾಡಿದ ಗೀತೆ ತೆಗೆಯಲು ಸೂಚಿಸಿದ್ದಾರೆ.
‘ನಿದ್ರಾದೇವಿ ನೆಕ್ ಡೋರ್’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಈ ಸಿನಿಮಾದಲ್ಲಿರುವ ಸೋನು ನಿಗಮ್ ಹಾಡು ತೆಗೆದು ಹಾಕುವಂತೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಗಣೇಶ್, ‘ಈ ಹಾಡಿನಲ್ಲಿ ನಾನೇ ನಟಿಸಿದ್ದರೂ ಪ್ರಾಮಾಣಿಕವಾಗಿ ಈ ಪ್ರಶ್ನೆ ಕೇಳುತ್ತಿದ್ದೆ. ನಮ್ಮಿಂದಲ್ಲ ಭಾಷೆ, ಭಾಷೆಯಿಂದ ನಾವು. ಭಾಷೆ ಉಳಿದರಷ್ಟೇ ನಾವು. ಭಾಷೆಯೇ ಇಲ್ಲಾಂದ್ರೆ ನಾವು ಏನು ಮಾಡೋದಕ್ಕಾಗುತ್ತೆ. ನಮ್ಮ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಮ್ಮಂಥವರು ಸಾವಿರಾರು ಜನ ಬಂದು ಹೋಗ್ತಾರೆ, ಆದರೆ ಉಳಿಯೋದು ಭಾಷೆ ಒಂದೇ. ಭಾಷೆಯನ್ನು ಬೆಳೆಸುತ್ತೇವೆ ಅನ್ನೋದಲ್ಲ, ಇರುವ ಭಾಷೆಯನ್ನು ಉಳಿಸಿಕೊಂಡು ಹೋಗಬೇಕು’ ಎಂಬ ಮಾತನ್ನು ಹೇಳಿದ್ದಾರೆ.
‘ಭಾಷೆನೇ ಇಲ್ಲಾಂದ್ರೆ ನಾವೇನು ಮಾಡೋಕಾಗುತ್ತೆ? ಸಾವಿರಾರು ವರ್ಷಗಳ ಇತಿಹಾಸ ಇದೆ. ಅದರಿಂದ ನಾವಷ್ಟೇ, ನಮ್ಮಿಂದ ಭಾಷೆ ಅಲ್ಲ. ನಮ್ಮಂತವರು ಸಾವಿರಾರು ಜನ ಬಂದು ಹೋಗ್ತಾರೆ. ಆದರೆ ಉಳಿಯೋದು ಭಾಷೆ ಒಂದೇ. ಭಾಷೆಯನ್ನ ಬೆಳೆಸೋದಲ್ಲ, ಉಳಿಸೋದು ಮುಖ್ಯ. ಇರುವ ಭಾಷೆಯನ್ನ ಉಳಿಸಿದರೇ ಅದೇ ಧನ್ಯ ಎಂದಿದ್ದಾರೆ. ಈ ಸಿನಿಮಾ ನಿರ್ಮಾಪಕರು ನನ್ನ ಮನವಿಯನ್ನ ಪರಿಗಣಿಸುತ್ತೇವೆ ಎಂದಿದ್ದಾರೆ. ಪಟ್ ಅಂತ ಹೇಳಿಬಿಡಿ, ಯೋಚನೆ ಮಾಡೋದು ಬೇಡ, ಚೇಂಜ್ ಮಾಡ್ತೀವಿ ಅಂತ ಹೇಳಿಬಿಡಿ. ಭಾಷೆಯೇ ಮೊದಲು’ ಎಂದು ಗಣೇಶ್ ಹೇಳಿದ್ದಾರೆ.