ಬೆಂಗಳೂರು : ಗೂಂಡಾಗಳನ್ನು ಕರೆಸಿ, ಹಲ್ಲೆ ಮಾಡಿ ಕೊಲರ್ ಬೆದರಿಕೆ ಹಾಕಿದ್ದಾಳೆ ಎಂದು ಪತ್ನಿಯ ವಿರುದ್ಧ ನಟ ಧನುಷ್ ದೂರು ನೀಡಿದ್ದಾರೆ. ಪತ್ನಿ ಅರ್ಷಿತಾ ವಿರುದ್ಧ ನಟ ಧನುಷ್ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಿವಾಜಿ ಸೂರತ್ಕಲ್ ಸಿನಿಮಾದ ನಾಯಕ ನಟನಾಗಿರುವ ಧನುಷ್ ಪತ್ನಿ ಅನುಮಾನ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾಳೆ ಎಂದು ಆರೋಪಿಸಿ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತ್ನಿ ಅನುಮಾನ ವ್ಯಕ್ತಪಡಿಸಿ ಹಲ್ಲೆ ಮಾಡಿದ್ದಾಳೆ ಎಂದು ಧನುಷ್ ದೂರು ನೀಡಿದ್ದಾರೆ. ಸುಳ್ಳು ಹೇಳಿ ಬೇರೆಯವರ ಜೊತೆಗೆ ವಿದೇಶ ಪ್ರವಾಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು, ಕೆಲಸದ ಮೇಲೆ ವಿದೇಶಕ್ಕೆ ಹೋಗಿದ್ದರು ಪತ್ನಿ ಅರ್ಷಿತಾ ಕಿರಿಕ್ ಮಾಡಿದ್ದಾರೆ. ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ಇದೀಗ ಧನುಷ್ ನಟಿಸುತ್ತಿದ್ದು, ಶಿವಾಜಿ ಸೂರತ್ಕಲ್ ಸಿನಿಮಾ ಸೇರಿದಂತೆ ಹಲವು ಚಲನಚಿತ್ರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.








