ಬೆಂಗಳೂರು : ನಟಿ ರಮ್ಯಾಗೆ ಮೆಸೇಜ್ ಪ್ರಕರಣವನ್ನು ಹಿಂಪಡೆಯುಂತೆ ನಟ ದರ್ಶನ್ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಅಶ್ಲೀಲ ಮೆಸೇಜ್ ವಿಚಾರಕ್ಕೆ ನಟ ದರ್ಶನ್ ಅಭಿಮಾನಿಗಳ ವಿರುದ್ಧ, 43 ಖಾತೆಗಳ ವಿರುದ್ಧ ರಮ್ಯಾ ದೂರು ನೀಡಿದ ಬೆನ್ನಲ್ಲೇ ನಟಿ ರಮ್ಯಾಗೆ ಮೆಸೇಜ್ ಮಾಡಿ, ಇನ್ಮುಂದೆ ಇಂತಹ ಮೆಸೇಜ್ ಮಾಡಲ್ಲ, ಕೇಸ್ ವಾಪಸ್ ತೆಗೆದುಕೊಳ್ಳಿ ಎಂದು ನಟ ದರ್ಶನ್ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಇದೀಗ 43 ಇನ್ಸ್ಟಾ ಅಕೌಂಟ್ ಬೆನ್ನತ್ತಿರುವ ಸಿಸಿಬಿ ಪೊಲೀಸರು ನಟಿ ರಮ್ಯಾ ಬಳಿ ಸೈಬರ್ ಕ್ರೈಂ ಪೊಲೀಸರು ಅಶ್ಲೀಲ ಮೆಸೇಜ್ ಅಕೌಂಟ್ ಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಯಾವ ಪೇಜ್ ಗಳಿಂದ ಅಶ್ಲೀಲ ಮೆಸೇಜ್ ಗಳು ಬಂದಿದ್ದವು? ಯಾವ ನಂಬರ್ ಗಳಿಂದ ಬೆದರಿಕೆ ಕರೆ ಬಂದಿತ್ತು? ಯಾವ ಅಕೌಂಟ್ ಗಳಿಂದ ಅಶ್ಲೀಲ ಮೆಸೇಜುಗಳು ಬಂದಿದ್ದವು? ಎಂದು ಎಲ್ಲದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ನಾವು ಈ ಒಂದು ದೂರನ್ನು ಸಿಸಿಬಿಗೆ ಕೊಟ್ಟಿದ್ದೇವೆ ಅವರು ಕ್ರಮ ಕೈಗೊಳ್ಳುತ್ತಾರೆ. ನಮ್ಮ ಸಿಸಿಬಿ ಸೈಬರ್ ಠಾಣೆಗೆ ನಟಿ ರಮ್ಯಾ ದೂರು ಕೊಟ್ಟಿದ್ದೇವೆ. ಅಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ದೂರಿನ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಮಾಡುತ್ತಾರೆ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅದರ ಬಗ್ಗೆ ಸಿಸಿಬಿ ಜಾಯಿಂಟ್ ಕಮಿಷನರ್ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.