ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಈ ವೇಳೆ ಅವರಿಗೆ ಬೆನ್ನಿನಲ್ಲಿ ನೋವು ಕಾಣಿಸಿಕೊಂಡಿದ್ದು ಬೆನ್ನಿನ ಹಿಂಭಾಗದಲ್ಲಿ ಊತ ಉಂಟಾಗಿದೆ ಹಾಗಾಗಿ ಇಂದು ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಆರೋಗ್ಯ ತಪಾಸಣೆ ಮಾಡಿದರು.
ಹೌದು ಜೈಲಿನಲ್ಲಿ ಇಂದು ಸಹ ದರ್ಶನ್ಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಜೈಲು ವೈದ್ಯ ಡಾ.ರಾಜಶೇಖರ್ ಅವರಿಂದ ಆರೋಗ್ಯ ತಪಾಸಣೆ ನಡೆಸಲಾಗಿದೆ. ಬೆನ್ನಿನ ಭಾಗದಲ್ಲಿ ಊತ ಕಡಿಮೆಯಾಗದೆ ನೋವು ಹೆಚ್ಚಳವಾಗಿದೆ. ದರ್ಶನ್ ಗೆ ಸ್ಕ್ಯಾನ್ ಮಾಡಿಸುವಂತೆ ವೈದ್ಯರು ಒತ್ತಾಯಿಸಿದ್ದಾರೆ. ಸ್ಕ್ಯಾನಿಂಗ್ ಬೇಡ ಸರ್ ಅಂತ ನಟ ದರ್ಶನ್ ಹಠ ಮಾಡುತ್ತಿದ್ದಾರೆ. ಕೋರ್ಟ್ ಏನು ಹೇಳುತ್ತೆ ನೋಡಿ ಡಿಸೈಡ್ ಮಾಡುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಕೂಡ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಈ ವೇಳೆ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿಗೆ ಭೇಟಿ ನೀಡಿ ನಟ ದರ್ಶನ್ ಅವರ ಆರೋಗ್ಯವನ್ನು ತಪಾಸಣೆ ಮಾಡಿದ್ದರು. ಈ ವೇಳೆ ವೈದ್ಯರು ಆಸ್ಪತ್ರೆಗೆ ದಾಖಲಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು.
ಆದರೆ ನಟ ದರ್ಶನ್ ಅವರು ಸ್ಕ್ಯಾನಿಂಗ್ ಎಲ್ಲಾ ಬೇಡ ನಾನು ಬೆಂಗಳೂರಿಗೆ ಹೋಗಿ ಮಾಡಿಸಿಕೊಳ್ಳುತ್ತೇನೆ. ಸದ್ಯ ನೋವು ನಿವಾರಕ ಮಾತ್ರೆಗಳನ್ನು ಮಾತ್ರ ಕೊಡಿ ಎಂದು ಕೇಳಿ ಪಡೆದಿದ್ದರು. ಇಂದು ಕೂಡ ನೋವು ಹೆಚ್ಚಳವಾದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಏನು ಆದೇಶ ಬರುತ್ತದೆ ಅದರ ಮೇಲೆ ಡಿಸೈಡ್ ಮಾಡುತ್ತೇನೆ ಎಂದು ನಟ ದರ್ಶನ್ ಅವರು ತಿಳಿಸಿದ್ದಾರೆ.