ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, A2 ಆರೋಪಿಯಿಂದ A1 ಆರೋಪಿಯನ್ನಾಗಿ ಮಾಡಲು ಇದೀಗ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಹೌದು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಅವರು ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈ ಒಂದು ಪ್ರಕರಣದಲ್ಲಿ ಪವಿತ್ರ ಗೌಡಾಳನ್ನು A1 ಆರೋಪಿನ್ನಾಗಿ ಮಾಡಲಾಗಿದ್ದು, ದಷ್ಟ ದರ್ಶನ ಅವರನ್ನು A2 ಆರೋಪಿನ್ನಾಗಿ ಪ್ರಕರಣ ದಾಖಲಾಗಿತ್ತು.
ಇದೀಗ ನಟ ದರ್ಶನ್ ಅವರನ್ನು A2 ನಿಂದ A1 ಆರೋಪಿಯನ್ನಾಗಿ ಮಾಡಿ ಚಾರ್ಜ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ವೇಳೆ ನಟ ದರ್ಶನ ಅವರನ್ನು A2 ಆರೋಪಿಯನ್ನಾಗಿ ಮಾಡಲಾಗಿತ್ತು. ಅಲ್ಲದೆ ಪವಿತ್ರ ಗೌಡರನ್ನು ಮೊದಲ ಆರೋಪಿ ಮಾಡಲಾಗಿತ್ತು. ಹಾಗಾಗಿ ಇದೀಗ ನಟ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.