ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ 131 ದಿನಗಳ ಬಳಿಕ ನಟ ದರ್ಶನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಹೈಕೋರ್ಟ್ ಇಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಹಾಗಾಗಿ ಇಂದು ಸಾಯಂಕಾಲ ನಟ ದರ್ಶನ್ ಅವರು ಬಳ್ಳಾರಿಗೆ ಎಲ್ಲಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಲ್ಲದೆ ಬಳ್ಳಾರಿ ಜೈಲಿಗೆ ಆದೇಶ ರವಾನೆಯಾಗಿದ್ದು, ಈ ಕುರಿತಂತೆ ಬೆಂಗಳೂರಿನ ಸಿಸಿಹೆಚ್ 57 ರ ಜಡ್ಜ್ ಜೈಶಂಕರ್ ಆದೇಶ ಹೊರಡಿಸಿದ್ದು, ಎಲ್ಲ ಕಾನೂನು ಪ್ರಕ್ರಿಯೆ ಮುಗಿದ ನಂತರ ಬಳಿಕ ಬಳ್ಳಾರಿ ಜೈಲಿಗೆ ಪೋಸ್ಟ್ ಮೂಲಕ ರಿಲೀಸ್ ಆದೇಶ ರವಾನಿಸಲು ಸೂಚಿಸಲಾಗಿದೆ.
ಹೌದು ಬಳ್ಳಾರಿ ಸೆಂಟ್ರಲ್ ಜೈಲ್ ಗೆ ದರ್ಶನ್ ಬಿಡುಗಡೆ ಆದೇಶದ ಪ್ರತಿ ರವಾನೆಯಾಗಿದೆ. ಇ-ಮೇಲ್ ಮೂಲಕ ಜೈಲಿಗೆ ಆದೇಶ ರವಾನಿಸಲು ಸೂಚನೆ ನೀಡಲಾಗಿದೆ. ಬೆಂಗಳೂರಿನ ಸಿ ಸಿ ಹೆಚ್ 57ರ ನ್ಯಾಯಾಧೀಶರಾದ ಜೈ ಶಂಕರ್ ಅವರು ಆದೇಶಿಸಿದ್ದಾರೆ. ಅಲ್ಲದೆ ಪೋಸ್ಟ್ ಮೂಲಕವೂ ಕೂಡ ರಿಲೀಸ್ ಆದೇಶ ರವಾನಿಸಲು ಸೂಚನೆ ನೀಡಿದ್ದಾರೆ. ಮುಂದಿನ ವಿಚಾರಣೆ ನವೆಂಬರ್ 20ಕ್ಕೆ ಮುಂದೂಡಲಾಗಿದೆ. ಹಾಗಾಗಿ ಸಂಜೆಯ ವೇಳೆಗೆ ಜೈಲಿನಿಂದ ನಟ ದರ್ಶನ್ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.