ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಲೆ ಆರೋಪಿ ನಟ ದರ್ಶನ್ ಅವರ ಬಳಿ ಇರುವ ಎರಡು ಲೈಸೆನ್ಸ್ ಗನ್ ಅನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಲೈಸೆನ್ಸ್ ರದ್ದಾಗಿದೆ ಪಿಸ್ತೂಲ್ ಠಾಣೆಗೆ ಸರಂಡರ್ ಮಾಡಿ ಹೀಗಂತ ಪೊಲೀಸರು ನೋಟಿಸ್ ಕೊಡೋಕೆ ತೆರಳಿದ್ದರು. ನಟ ದರ್ಶನ್ ಮನೆಗೆ ಆರ್ ಆರ್ ನಗರ ಠಾಣೆ ಪೋಲಿಸರು ತೆರಳಿದ್ದರು.ಈ ವೇಳೆ ನೋಟಿಸ್ ಪಡೆದು ನಟ ದರ್ಶನ್ ಗನ್ ಸೆರೆಂಡರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು ನಗರ ಪೊಲೀಸ್ ಆಡಳಿತ ವಿಭಾಗ ದರ್ಶನ್ ಬಳಿರುವ 2 ಗನ್ ಗಳ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ಕ್ಯಾನ್ಸಲ್ ಮಾಡಿತ್ತು. ಅಲ್ಲದೆ ಬೆಂಗಳೂರಿನ ಆರ್ ಆರ್ ನಗರ ಠಾಣೆ ಪೊಲೀಸರಿಗೆ ಕೂಡಲೇ ಗನ್ ಗಳನ್ನು ವಶಪಡಿಸಿಕೊಳ್ಳಿ ಎಂದು ಸೂಚನೆ ನೀಡಿತ್ತು.ಈ ಹಿನ್ನೆಲೆಯಲ್ಲಿ ಇದೀಗ ಆರ್ ಆರ್ ಠಾಣೆಯ ಪೊಲೀಸರು ದರ್ಶನ್ ಮನೆಗೆ ನೋಟಿಸ್ ಬಂದಾಗ ದರ್ಶನವರು 2 ಗನ್ ಗಳನ್ನು ಸರಂಡರ್ ಮಾಡಿದ್ದಾರೆ.