ನವದೆಹಲಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ಡಿಸೆಂಬರ್ ನಲ್ಲಿ ನಟ ದರ್ಶನ್ ಸೇರಿದಂತೆ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಹೈಕೋರ್ಟ್ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಇಂದು ಸುಪ್ರೀಂ ಕೋರ್ಟ್ ನಲ್ಲಿ ನ್ಯಾ.ಪರ್ದಿವಾಲ, ನ್ಯಾ. ಮಹದೇವನ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಿತು. ಎರಡು ಕಡೆಯ ವಾದ ಆಲಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಕಾಯ್ದಿರಿಸಿ ಆದೇಶ ಹೊರಡಿಸಿದೆ. ಮೂರೂ ಪುಟದೊಳಗೆ ಲಿಖಿತವಾದ ವಾದ ಅಂಶ ಸಲ್ಲಿಸಿ ಮೂರು ವಾರದಲ್ಲಿ ಲಿಖಿತವಾದ ವಾದ ಅಂಶ ಸಲ್ಲಿಸಲು ಇದೆ ವೇಳೆ ಸೂಚನೆ ನೀಡಲಾಯಿತು.
ವಿಚಾರಣೆಯ ವೇಳೆ ಎಷ್ಟು ಅರ್ಜಿಗಳು ನಮ್ಮ ಹೊಂದಿವೆ ಎಂದು ಜಡ್ಜ್ ಇದೆ ವೇಳೆ ಪ್ರಶ್ನಿಸಿದರು. ಏಳು ಅರ್ಜಿಗಳು ಸುಪ್ರೀಂ ಕೋರ್ಟ್ ಮುಂದಿವೇ ಎಂದು ರಾಜ್ಯ ಸರ್ಕಾರದ ಪರವಾಗಿ ವಕೀಲ ಸಿದ್ಧಾರ್ಥ ಲೂತ್ರ ತಿಳಿಸಿದರು. ಏಳು ಜನರ ಜಾಮೀನು ರದ್ದುಪಡಿಸಲು ಸರ್ಕಾರ ಅರ್ಜಿ ಸಲ್ಲಿಸಿದೆ ಎಂದಾಗ ಹೌದು ಎಂದು ಸಿದ್ಧಾರ್ಥ ಲೂತ್ರ ವಾದ ಮಂಡನೆ ಆರಂಭಿಸಿದರು. ಈ ವೇಳೆ ಯಾರು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು.
ಅಪಾರ್ಟ್ಮೆಂಟ್ ಒಂದರ ಗಾರ್ಡ್ ಈ ದೂಗು ದಾಖಲಿಸಿದ್ದಾರೆ ಎಂದು ತಿಳಿಸಿದರು. ಏಳು ಆರೋಪಿಗಳಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಜಾಮೀನು ರದ್ದಾಗಬೇಕು ಎನ್ನುವುದು ನಮ್ಮ ವಾದ. ಅಪಾರ್ಟ್ಮೆಂಟ್ ಬಳಿ ಡೆಡ್ ಬಾಡಿ ಸಿಕ್ಕಿದೆ ಸರ್ಕಾರ ಸಲ್ಲಿಸಿರುವ ದಾಖಲೆಯನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇದೇ ವೇಳೆ ಪರಿಶೀಲಿಸಿದರು.ಸಿಸಿಟಿವಿ ಪರಿಶೀಲಿಸಿದಾಗ ಕೆಲವು ವಾಹನಗಳು ಓಡಾಡಿರುವುದು ಅನುಮಾನಾಸ್ಪದವಾಗಿ ಓಡಾಡಿರುವುದು ಕಂಡುಬಂದಿದ್ದನ್ನು ಪೋಲೀಸರು ಪರಿಶೀಲಿಸಿದ್ದಾರೆ ಪೊಲೀಸರು ತನಿಖೆಯ ವೇಳೆ ಈ ವಾಹನಗಳು ಪಟ್ಟಣಗೆರೆ ಶೆಡ್ ನಿಂದ ಬಂದಿರುವುದು ಪತ್ತೆಯಾಗಿದೆ. ಮೂವರೂ ಸೆರೆಂಡರ್ ಆದರು ಆದರೆ ಅವರು ತಪ್ಪಿತಸ್ಥರಲ್ಲ.
ಈಗ ದೋಷಾರೋಪ ಪಟ್ಟಿ ದಾಖಲಾಗಿದೆಯೇ? 17 ಜನರಲ್ಲಿ ಏಳು ಜನರು ಜಾಮೀನು ರದ್ದಾಗಬೇಕು ಎಂದು ಬಯಸಿದ್ದೀರಾ? ಎಂದು ಸರ್ಕಾರದ ಪರ ವಕೀಲರಿಗೆ ಪ್ರಶ್ನೆ ಮಾಡಿದರು. ಈ ವೇಳೆ ಸಿದ್ದಾರ್ಥ ಲೂತ್ರ ಏಳು ಜನರ ಜಾಮೀನು ಆದೇಶವಾದ ಬಳಿಕ ಇನ್ನಷ್ಟು ಜನರಿಗೆ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸುತ್ತೇವೆ. ಸದ್ಯ 7 ಜನರ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಉತ್ತರಿಸಿದರು.ಕೇವಲ ಸಾಂಧರ್ಭಿಕ ಸಾಕ್ಷಿಯ ಆಧಾರದ ಮೇಲೆ ಕೇಸ್ ದಾಖಲಾಗಿದೆಯೇ? ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು. ಇಲ್ಲ ಪ್ರತ್ಯಕ್ಷದರ್ಶಿ ಇದ್ದಾರೆ, ಅಲ್ಲದೇ ಫೋಟೋ ಕೂಡ ಇದೆ ಎಂದು ಸಿದ್ದಾರ್ಥ್ ಲೂತ್ರ ಉತ್ತರಿಸಿದರು. ಈ ಫೋಟೋದಲ್ಲಿ ಈ ಏಳು ಜನರು ಇದ್ದಾರೆಯೇ? ಎಂದು ಜಡ್ಜ್ ಪ್ರಶ್ನಿಸಿದರು. ಈ ಕೊಲೆಯ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.
ರೇಣುಕಾ ಸ್ವಾಮಿ ದರ್ಶನ್ ಫ್ಯಾನ್ ಆಗಿದ್ದ. ಈತ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ದರ್ಶನ್ ಮತ್ತು ಪವಿತ್ರ ಗೌಡ ಲಿವಿಂಗ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು. ಈ ವಿಷಯ ಪವಿತ್ರ ಗೌಡ A3ಗೆ ತಿಳಿಸಿದಳು. ಆತ ನಂತರ ದರ್ಶನ್ಗೆ ತಿಳಿಸಿದ್ದಾನೆ. ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಕಿಡ್ನಾಪ್ ಮಾಡಿದರು ದಾರಿಯಲ್ಲಿ ಆತನ ದುಡ್ಡಲ್ಲೇ ಡ್ರಿಂಕ್ಸ್ ಮಾಡಿದರು.ನಂತರ ಶೆಡ್ಗೆ ಕರೆ ತಂದು ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದರು. ದರ್ಶನ್ ಗೆ ಕ್ರಿಮಿನಲ್ ಹಿನ್ನೆಲೆ ಇದೆ. ಅಲ್ಲದೆ ಜಾಮೀನು ಮೇಲೆ ಹೊರಬಂದಾಗಲು ಸಾಕ್ಷಿಯ ಜೊತೆಗೆ ದರ್ಶನ್ ಇದ್ದ. ಜೈಲಿಗೆ ಹೋದಾಗಲೂ ಅಪರಾಧಿಗಳೊಂದಿಗೆ ಸಿಗರೇಟ್ ಸೇದುತ್ತಿದ್ದ. ಮೆಡಿಕಲ್ ಬೇಲ್ ಮೇಲೆ ಹೊರಬಂದು ಆಸ್ಪತ್ರೆಯಲ್ಲಿ ಇದ್ದ. ಎಲ್ಲಾ ಆರೋಪಿಗಳು ಜಮೀನನ ಮೇಲೆ ಹೊರ ಬಿದ್ದಿದ್ದಾರೆ ಅಲ್ಲವೇ? ಎಂದು ಸುಪ್ರೀಂ ಕೋರ್ಟ್ ಜಡ್ಜ್ ಸರ್ಕಾರದ ಪರ ವಕೀಲರಿಗೆ ಪ್ರಶ್ನಿಸಿದರು. ಕೊಲೆಯಲ್ಲಿ ಪ್ರತಿಯೊಬ್ಬರ ವೈಯಕ್ತಿಕ ಪಾತ್ರದ ಬಗ್ಗೆ ತಿಳಿಸಿ ಎಂದು ಜಡ್ಜ್ ತಿಳಿಸಿದರು.
ಈ ವೇಳೆ ಸಿದ್ದಾರ್ಥ ಲೂತ್ರ ದೋಷಾರೋಪ ಇನ್ನೂ ಹೊರಿಸಲಾಗಿಲ್ಲ. ಎಲ್ಲಾ ಆರೋಪಿಗಳು ಈಗ ಜಾಮೀನಿನ ಮೇಲೆ ಇದ್ದಾರೆ. ಪ್ರತಿಯೊಬ್ಬರ ಪಾತ್ರದ ಬಗ್ಗೆ ಲಿಖಿತವಾದ ವಾದಾಂಶ ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಜಡ್ಜ್ ಗೆ ತಿಳಿಸಿದರು. ಸತ್ವ ಅಪಾರ್ಟ್ಮೆಂಟ್ ಬಳಿ ಸ್ಕಾರ್ಪಿಯೊ ಮತ್ತಿತರ ವಾಹನಗಳ ಓಡಾಟ ನಡೆಸಿದ್ದು ಸಿರಿದಂತೆ ಸಿಸಿಟಿವಿಯಲ್ಲಿ ವಾಹನಗಳು ಓಡಾಡಿರುವುದು ಸೆರೆಯಾಗಿದೆ ಎಂದು ಘಟನೆಯ ವಿವರ ಸರ್ಕಾರದ ಪರ ವಕೀಲರು ಜಡ್ಜ್ ಗೆ ವಿವರಿಸಿದರು.ನಿಮ್ಮ ಸಿಸಿಟಿವಿಯಲ್ಲಿ ಎರಡು ಕಾರುಗಳು ಓಡಾಡಿರುವುದು ಕಂಡು ಬಂದಿದೆ. ಜೀಪ್ ರಾಂಗ್ಲರ್, ಸ್ಕಾರ್ಪಿಯೊ ಓಡಾಡಿರುವುದು ಕಂಡುಬಂದಿದೆ. ಈ ವ್ಯಕ್ತಿಗಳು ಸಾಕ್ಷಿಯ ನಾಶಕ್ಕೆ ಯತ್ನಿಸಿದ್ದರಲ್ಲವೇ? ಈ ಆರೋಪಿಗಳ ಜಾಮೀನು ರದ್ದಿಗು ನೀವು ಅರ್ಜಿ ಸಲ್ಲಿಸಿದ್ದೀರಾ? ಎಂದು ಜಡ್ಜ್ ಪ್ರಶ್ನಿಸಿದರು. ವಾಹನದಲ್ಲಿದ್ದ ಆರೋಪಿಗಳನ್ನು ಗುರುತಿಸಲಾಗಿದೆ. ಅವರಿಗೂ ಈಗ ಜಾಮೀನು ಸಿಕ್ಕಿದೆ ಎಂದು ಸರ್ಕಾರದ ಪರ ವಕೀಲ ಸಿದ್ಧಾರ್ಥ ಲೂತ್ರ ತಿಳಿಸಿದರು.
ರಾಂಗ್ಲರ್ ಜೀಪ್ ವಿನಯ್ ಎಂಬಾತನಿಗೆ ಸೇರಿದ್ದು, ಆತ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನ ಮಾಲೀಕ ಹಾಗೂ ಆರೋಪಿಯಾಗಿದ್ದಾನೆ. ಮೂರು ಜನ ತಾವೇ ಕೊಲೆ ಮಾಡಿದ್ದೀವಿ ಎಂದು ಶರಣಾಗಿದ್ದರು. A4 ರಾಘವೇಂದ್ರ ಸಿಡಿಆರ್ ಪರಿಶೀಲಿಸಿದಾಗ 45 ಕಾಲ್ ಮಾಡಿದ್ದಾನೆ. ಘಟನೆ ವೇಳೆ ನಾಗರಾಜುಗೂ ಈತ ಮೆಸೇಜ್ ಮಾಡಿದ್ದಾನೆ. ಪವನ್ ಸೂಚನೆ ಮೇರೆಗೆ ರೇಣುಕಾ ಸ್ವಾಮಿಯನ್ನು ಕಿಡ್ನ್ಯಾಪ್ ಮಾಡಲಾಗಿದೆ. ದರ್ಶನ್, ಪವಿತ್ರ ಗೌಡ ಮತ್ತು ಇತರರು ಶೆಡ್ ಗೆ ಬಂದು ಆತನ ಮೇಲೆ ಹಲ್ಲೆ ಮಾಡಿದರು. ಹಲ್ಲೆಯಿಂದಾಗಿ ರೇಣುಕಾ ಸ್ವಾಮಿ ಮೃತಪಟ್ಟಿದ್ದಾನೆ ಎಂದು ಸರ್ಕಾರದ ಪರ ವಕೀಲ ಸಿದ್ಧಾರ್ಥ ಲೂತ್ರ ವಾದಿಸಿದರು.
ಹಲ್ಲೆ ಮಾಡಿದ ಅಪರಾಧಿಗಳಲ್ಲಿ ಎಷ್ಟು ಜನರ ಅರ್ಜಿ ನಮ್ಮ ಮುಂದಿದೆ ಎಂದು ಜಡ್ಜ್ ಕೇಳಿದಾಗ A-1, A-2, A-6, A-7, A-11, A-12 A-14 ಇವರ ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಸಿದ್ದಾರ್ಥ ಲೂತ್ರ ಜಡ್ಜ್ ಗೆ ತಿಳಿಸಿದರು. A-3 ಪವನ್, A-10 ವಿನಯ್ ದರ್ಶನ್ ಮ್ಯಾನೇಜರ್ A-11ನಾಗರಾಜ್ ಅವರೊಂದಿಗೆ ಸಂಪರ್ಕದಲ್ಲಿದ್ದ. ನಂತರ A-10, A-12 ರನ್ನು ಬಂಧಿಸಲಾಯಿತು. A-3 ಪವನ್ ದರ್ಶನ್ ಪವಿತ್ರ ಗೌಡರ ಕೆಲಸದಲ್ಲಿದ್ದ. ನಂತರ ಮೈಸೂರಿನಲ್ಲಿ ದರ್ಶನ್ ನನ್ನು ಬಂಧಿಸಿ ಕರೆ ತರಲಾಯಿತು. ಪವಿತ್ರ ಗೌಡ ಹಾಗೂ ಉಳಿದವರು ಕೂಡ ಬಂಧಿಸಲಾಯಿತು .ಹಲ್ಲೆಯ ಪ್ರತ್ಯಕ್ಷದ ಶ್ರೀ ಯಾರಾದರೂ ಇದ್ದಾರಾ ಎಂದು ಜಡ್ಜ್ ಪ್ರಶ್ನಿಸಿ ದಾಗ, ಪುನೀತ್ ಹಾಗೂ ಕಿರಣ್ ಈ ಘಟನೆಯಾ ಪ್ರತ್ಯಕ್ಷ ದರ್ಶಿಗಳು ಎಂದು ಲೂತ್ರ ತಿಳಿಸಿದರು.
ಅವರು ಪ್ರತ್ಯಕ್ಷ ದರ್ಶಿಗಳ ಎಂದು ಜಡ್ಜ್ ಮತ್ತೊಮ್ಮೆ ಪ್ರಶ್ನಿಸಿದಾಗ, ಹೌದು ಇವರು ಶೆಡ್ನಲ್ಲಿ ಕೆಲಸಗಾರರಾಗಿದ್ದರು. ಸಿದ್ದಾರ್ಥ ಲೂತ್ರ ಪುನೀತ್ ಹಾಗೂ ಕಿರಣ್ ಘಟನೆ ಪ್ರತ್ಯಕ್ಷ ದರ್ಶಿಗಳು ನೀವು ಪ್ರತ್ಯಕ್ಷ ಸಾಕ್ಷಿಗಳನ್ನು ಯಾವಾಗ ಬತ್ತೆ ಹಚ್ಚಿದ್ದೀರಿ ಎಂದು ಜಡ್ಜ್ ಕೇಳಿದಾಗ ಒಬ್ಬನ ಹೇಳಿಕೆಯನ್ನು ಏಳು ದಿನಗಳಲ್ಲಿ ದಾಖಲಿಸಲಾಗಿದೆ ಮತ್ತೊಬ್ಬನ ಹೇಳಿಕೆಯನ್ನು 20 ದಿನಗಳಲ್ಲಿ ದಾಖಲಿಸಲಾಗಿದೆ.
ಏಳು ದಿನಗಳಲ್ಲಿ ಕಿರಣ್ ಹೇಳಿಕೆಯನ್ನು ದಾಖಲಿಸಲಾಗಿದೆ 12 ದಿನಗಳಲ್ಲಿ ಪುನೀತ್ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಅವರ ಹೇಳಿಕೆಯನ್ನು ಸರ್ಕಾರದ ಪರ ವಕೀಲ ಸಿದ್ದಾರ್ಥ್ ಲೂತ್ರ ಓದಿದರು.
ಕೊಲೆ ಆರೋಪಿ ಸ್ಥಾನದಲ್ಲಿರುವ ದರ್ಶನ್ ಫೇಮಸ್ಸೋ ಅಲ್ಲವೋ ಅನ್ನೋದು ಬೇಡ ಈ 7 ಜನರನ್ನು ಅವನು ಗುರುತಿಸಿದ್ದಾನೆಯೇ? ಎಂದು ಜಡ್ಜ್ ಪ್ರಶ್ನಿಸಿದರು. ಹೌದು ಪ್ರತ್ಯಕ್ಷದರ್ಶಿ ಇವರನ್ನು ಗುರುತಿಸಿದ್ದಾನೆ. ಘಟನೆಯ ಸಂಪೂರ್ಣ ವಿವರವನ್ನು ಪುನೀತ್ ಹೇಳಿದ್ದಾನೆ ಎಂದು ಲೂತ್ರ ತಿಳಿಸಿದರು. ಇದರಲ್ಲಿ ದರ್ಶನ್ ಪವಿತ್ರ ಎಲ್ಲಿ ಬರುತ್ತದೆ? ಎಂದು ಜಡ್ಜ್ ಪ್ರಶ್ನಿಸಿದರು. ರೇಣುಕಾ ಸ್ವಾಮಿಗೆ ಹೊಡೆದು ಫೋಟೋ ವಿಡಿಯೋವನ್ನು ಕಳುಹಿಸಿದರು. ಆ ವಿಡಿಯೋ ಈಗ ಡಿಲೀಟ್ ಆಗಿದೆ. ಬ್ಲಾಕ್ ಸ್ಕಾರ್ಪಿಯೋ ಕಾರಿನಲ್ಲಿ ದರ್ಶನ್ ಮತ್ತು ಪವಿತ್ರ ಬಂದಿದ್ದರು ಎಂದು ಆ ಒಂದು ಹೇಳಿಕೆಯನ್ನು ಸಿದ್ಧಾರ್ಥ ಲೂತ್ರ ಓದಿದರು.
ಇನ್ನೊಬ್ಬ ಸಾಕ್ಷಿಯ ಹೇಳಿಕೆ ಎಲ್ಲಿದೆ ಎಂದು ಕೇಳಿದಾಗ, ಕಿರಣ್ ಹೇಳಿಕೆಯನ್ನು ಲೂತ್ರ ಜಡ್ಜ್ ಗೆ ತೋರಿಸಿದರು.ಇಬ್ಬರು ಪ್ರತ್ಯಕ್ಷ ದರ್ಶಿಗಳಿದ್ದಾರೆ, ನಂಬಬಹುದೋ ಇಲ್ಲವೋ ಟ್ರಯಲ್ ಕೋರ್ಟ್ ತೀರ್ಮಾನಿಸುತ್ತದೆ. ಪ್ರತ್ಯಕ್ಷದರ್ಶಿಯ ಹೇಳಿಕೆಗೆ ಪೂರಕ ಸಾಕ್ಷಿಗಳಿವೆಯೇ? ಎಂದು ಜಡ್ಜ್ ಇದೆ ವೇಳೆ ಪ್ರಶ್ನಿಸಿದರು.ಪ್ರತ್ಯಕ್ಷ ದರ್ಶಿಗಳ ಹೇಳಿಕೆಗೆ ಸಾಂಧರ್ಭಿಕ ಸಾಕ್ಷಿ ಪೂರಕ ಫೋರೆನ್ಸಿಕ್ ರಿಪೋರ್ಟಲ್ಲಿರುವ ಗಾಯದ ಗುರುತು, ಅಶೋಕ್ ಲೈಲ್ಯಾಂಡ್ ಫೋಟೋ ಇಂಪಾರ್ಟೆಂಟ್ ಆಗಿದ್ದು, ಘಟನೆ ಬಳಿಕ ದರ್ಶನ್ ಅದೇ ಜಾಗದಲ್ಲಿದ್ದ ಫೋಟೋ ಲಭ್ಯವಾಗಿದೆ. ಕ್ರಾಂತಿ ಸಿನಿಮಾಗೆ ಈ ಶೆಡ್ ನಲ್ಲಿ ಶೂಟಿಂಗ್ ಮಾಡಲಾಗಿದೆ ಎಂದು ಸಿದ್ದಾರ್ಥ್ ಲೂತ್ರ ತಿಳಿಸಿದರು.
ಸಾಕ್ಷಿ ನಂಬರ್ 85, 86 ಹೇಳಿಕೆ ತೋರಿಸಿ ಎಂದು ಜಡ್ಜ್ ಕೇಳಿದಾಗ ಇದರಲ್ಲಿ ಪವಿತ್ರ ಸ್ನೇಹಿತರ ಬಳಿ ತಪ್ಪೋಪ್ಪಿಕೊಂಡಿದ್ದಾರೆಂದು ಇದೆ ಎಂದು ಸಮಂತಾ ಹೇಳಿಕೆಯನ್ನು ಸಿದ್ಧಾರ್ಥ್ ಲೂತ್ರ ಇದೆ ವೇಳೆ ಕೋರ್ಟ್ ಗೆ ತೋರಿಸಿದರು. ದರ್ಶನ್ ಪವಿತ್ರಾಗೌಡ ಹಾಗೂ ತಮ್ಮ ನಡುವಿನ ಒಡನಾಟದ ವಿವರ ಬಗ್ಗೆ ಸಮಂತ ವಿವರಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ವಿದೇಶ ಪ್ರವಾಸಕ್ಕೆ ಪವಿತ್ರಗೌಡ ಮುನಿಸಿಕೊಂಡಿದ್ದರು. ದರ್ಶನ್ ಕರೆ ಮಾಡಿದ್ದ ಬಗ್ಗೆ ಆಕೆಗೆ ಪವಿತ್ರ ಗೌಡ ಹೇಳಿದ್ದಳು. ರೇಣುಕಾ ಸ್ವಾಮಿಯನ್ನು ಇಂದು ಕರೆ ತರುತ್ತಿದ್ದಾರೆ ಇದು ಈ ಕೇಸಿನ ಪೂರಕ ಸಾಕ್ಷವಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಸಿದ್ಧಾರ್ಥ ಲೂತ್ರ ಜಡ್ಜ್ ಗೆ ವಿವರಿಸಿದ್ದರು.
ಕೊಲೆಗೆ ಸಂಬಂಧಿಸಿದಂತೆ ತನ್ನ ಪತ್ನಿಯಿಂದ ಸಹಾಯ ಕೇಳಿದ್ದ. ಆರೋಪಿ ವಿನಯ್ ಸಮಂತಾಗೆ ಸಹಾಯ ಕೇಳಿದ್ದರ ಬಗ್ಗೆ ಹೇಳಿಕೆ ದಾಖಲಾಗಿದೆ. ರೇಣುಕಾಸ್ವಾಮಿಯ ದೇಹದ ಫೋಟೋವನ್ನು ಶೇರ್ ಮಾಡಿದ್ದರು. ವಿನಯ್ ಬಳಿ ರೇಣುಕಾ ಸ್ವಾಮಿ ಹಲ್ಲೆ ಫೋಟೋ ಹೇಗೆ ಸಿಕ್ಕಿತು? ಆ ಫೋಟೋದಲ್ಲಿ ಆರೋಪಿಗಳ ಫೋಟೋ ಕೂಡ ಇದೆಯೇ? ಎಂದು ಜಡ್ಜ್ ಪ್ರಶ್ನಿಸಿದರು. ಆ ಫೋಟೋದಲ್ಲಿ ರೇಣುಕಾ ಸ್ವಾಮಿ ದೇಹದ ದೃಶ್ಯ ಮಾತ್ರ ಇದೆ. ರೇಣುಕಾಸ್ವಾಮಿಯ ದೇಹದ ಬಳಿಯಲ್ಲಿಯೇ ಅಶೋಕ್ ಲೇಲ್ಯಾಂಡ್ ವಾಹನವಿದೆ. ಅದರ ಬಳಿ ಆರೋಪಿಗಳು ದರ್ಶನ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್ ಪ್ರಶ್ನೆಗೆ ಸಿದ್ದಾರ್ಥ ಲೂತ್ರ ಉತ್ತರಿಸಿದರು.
ಇದನ್ನು ನಂಬಲು ಆಗುತ್ತಿಲ್ಲ. ಘಟನೆ ನಂತರ ಫೋಟೋ ತೆಗೆಸಿಕೊಂಡರೆ ಕೊಲೆ ಮಾಡಿ ಇಂತಹ ಫೋಟೋ ತೆಗೆದುಕೊಳ್ಳಲು ಸಾಧ್ಯವೇ? ಇವರೆಂಥ ವ್ಯಕ್ತಿಗಳು, ನಾನು ಆಕಸ್ಮಿಕ ಫೋಟೋ ಅಂತ ಅಂದುಕೊಂಡಿದ್ದೆ ದರ್ಶನ್ ಜೊತೆಗೆ ಆರೋಪಿಗಳ ಫೋಟೋಗೆ ಜಡ್ಜ್ ಜೆ.ಬಿ ಪರ್ದಿವಾಲಾ ಅಚ್ಚರಿ ವ್ಯಕ್ತಪಡಿಸಿದರು. ಕಿರಣ್ ಪುನೀತ್ ಫ್ಯಾನ್ ಗಳಾಗಿದ್ದರೆ ಯಾಕೆ ಹೇಳಿಕೆ ನೀಡಿದರು? ಎಂದು ಜಡ್ಜ್ ಪ್ರಶ್ನಿಸಿದರು. ಕಿರಣ್, ಪುನೀತ್ ಶೆಡ್ ನ ಕೆಲಸಗಾರರು ಇವರೆಲ್ಲ ಕಲ್ಟ್ ಅಭಿಮಾನಿಗಳು ಇವರು ಯಾವುದಕ್ಕೂ ಹೇಸುವುದಿಲ್ಲ ಎಂದು ಸಿದ್ಧಾರ್ಥ ನೂತ್ರ ಜಡ್ಜ್ ಗೆ ತಿಳಿಸಿದರು.
ನಿಮಗೆ ಕೊನೆ ಪ್ರಶ್ನೆ ಕೇಳುತ್ತೇವೆ. ಹೈಕೋರ್ಟ್ ಈ ಇಬ್ಬರು ಸಾಕ್ಷಿಗಳ ಬಗ್ಗೆ ಏನು ಹೇಳಿದೆ? ಅವರು ನಂಬಲರ್ಹ ಸಾಕ್ಷಿ ಅಲ್ಲವೆಂದು ಏಕೆ ಭಾವಿಸಿದರು? ಎಂದು ಜಡ್ಜ್ ಪ್ರಶ್ನಿಸಿದರು. ಪ್ರತ್ಯಕ್ಷ ದೃಶ್ಯಗಳ ಹೇಳಿಕೆಯಲ್ಲಿ ಪರಸ್ಪರ ವಿರೋಧಾಭಾಸವಿದೆ ಎಂದು ಹೈಕೋರ್ಟ್ ಹೇಳಿದೆ. ಜೂನ್ 11ರಂದೆ ಪೊಲೀಸರು ಶೆಡ್ಡಿನ ಈ ಜಾಗ ವಶಕ್ಕೆ ಪಡೆದಿದ್ದರು. ಆದರೆ ಸಾಕ್ಷಿಗಳ ಹೇಳಿಕೆ ದಾಖಲು ವಿಳಂಬದ ಬಗ್ಗೆ ಉಲ್ಲೇಖಿಸಲಾಗಿದೆ ಆರೋಪಿಗಳ ಬಟ್ಟೆ ಮೇಲೆ ರೇಣುಕಾ ಸ್ವಾಮಿಯ ರಕ್ತದ ಕಲೆ ಪತ್ತೆಯಾಗಿದೆ. ಲಾಠಿ, ಮರದ ಕೊಂಬೆ, ಹಗ್ಗ ಇತ್ಯಾದಿಗಳ ಮೇಲೆ ರೇಣುಕಾ ಸ್ವಾಮಿಯ ರಕ್ತದ ಕಲೆ ಸಿಕ್ಕಿದೆ ಎಂದು ಸರ್ಕಾರದ ಪರ ವಕೀಲ ಸಿದ್ಧಾರ್ಥ ಲೂತ್ರ ಅವರ ವಾದ ಅಂತ್ಯಗೊಳಿಸಿದರು.
ಬಳಿಕ ದರ್ಶನ್ ಪರ ಸಿದ್ದಾರ್ಥ ದವೆ ವಾದ ಆರಂಭಿಸಿದರು. ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಏಕೆ ನಂಬಬಾರದು? 164 ಹೇಳಿಕೆಯನ್ನು ಈ ಹಂತದಲ್ಲಿ ಏಕೆ ಪರಿಗಣಿಸಬಾರದು? ಎಫ್ಎಸ್ಎಲ್ ಸಾಧರ್ಭಿಕ ಸಾಕ್ಷಿಗಳನ್ನು ಏಕೆ ನಂಬಬಾರದು? ಕ್ರಿಮಿನಲ್ ಒಳಸಂಚು ಕೊಲೆ ಅಂತಹ ಗಂಭೀರ ಆರೋಪವಿದೆ. ಮೃತಪಟ್ಟವನ್ನು ಕಿರುಕುಳ ನೀಡುವವನಿರಬಹುದು. ಆದರೆ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪವಿದೆ. ಈ ಸಾಕ್ಷಿಗಳನ್ನು ನಿರ್ಲಕ್ಷಿಸಲು ಸಾಧ್ಯವೇ? ಎಂದು ಜಡ್ಜ್ ದರ್ಶನ್ ಪರ ವಕೀಲರಿಗೆ ಜಡ್ಜ್ ಪ್ರಶ್ನಿಸಿದರು.
ಜಡ್ಜ್ ಪ್ರಶ್ನೆಗಳಿಗೆ ದರ್ಶನ್ ಪರ ವಕೀಲ ಸಿದ್ಧಾರ್ಥ ದವೆ ಉತ್ತರಿಸಿ, ಬಟ್ಟೆಗಳನ್ನು ಮೂರು ದಿನಗಳ ಬಳಿಕ ವಶಕ್ಕೆ ಪಡೆದಿದ್ದಾರೆ. ಅಷ್ಟರಲ್ಲಿ ಬಟ್ಟೆಗಳನ್ನು ಒಗೆದು ಒಣ ಹಾಕಲಾಗಿತ್ತು ಎಂದು ಹೇಳಲಾಗಿದೆ. ಮಹಜರ್ ವೇಳೆ ಕಲೆ ಕಂಡುಬಂದಿಲ್ಲ. ಫೋರೆನ್ಸಿಕ್ ನಲ್ಲಿ ರಕ್ತದ ಕಲೆ ಕಂಡು ಬಂದಿದೆ ಎಂದು ಹೇಳುತ್ತಿದ್ದಾರೆ. ಇದ್ಯಾವುದನ್ನು ನಂಬಲು ಸಾಧ್ಯವಿಲ್ಲ. ಪುನೀತ್ 12 ದಿನಗಳ ಕಾಲ ನಾಪತ್ತೆಯಾಗಿದ್ದ ಬಗ್ಗೆ ಸಂಶಯವಿದೆ. ಹೇಳಿಕೆ ನೀಡುವವನಾಗಿದ್ದರೆ ಘಟನೆ ಬಳಿಕವೇ ಹೇಳಿಕೆ ನೀಡುತ್ತಿದ್ದ ಎಂದು ಜಡ್ಜ್ ಗೆ ಉತ್ತರಿಸಿದರು.
ಒಟ್ಟಾರೆ ಘಟನೆಯೇ ನಂಬಲ ಅರ್ಹವಾಗಿಲ್ಲವೇ ಎಂದು ಜಡ್ಜ್ ಪ್ರಶ್ನಿಸಿದರು. ಎರಡು ಪ್ರತ್ಯಕ್ಷ ದರ್ಶಿಗಳು ನಂಬಲರ್ಹವಾಗಿಲ್ಲ ಇಬ್ಬರು ಸಾಕ್ಷಿಗಳ ಹೇಳಿಕೆಗೆ ಪೂರಕ ಸಾಕ್ಷಿಗಳಿಲ್ಲವೇ? ಎಂದು ಜಡ್ಜ್ ಪ್ರಶ್ನಿಸಿದರು.ಸಾಕ್ಷ ಈ ಹಂತದಲ್ಲಿ ಪರಿಗಣಿಸಬಾರದು ಪವಿತ್ರ ಸ್ನೇಹಿತೆಯ ಬಳಿ ನೀಡಿದ ಹೇಳಿಕೆ ದುರ್ಬಲ ವೆಂಬುವುದು ದರ್ಶನ್ ಪರ ವಕೀಲ ದವೆಗೆ ಜಡ್ಜ್ ಪ್ರಶ್ನಿಸಿದರು. ಆರೋಪಗಳನ್ನು ದೋಷ ಮುಕ್ತಗೊಳಿಸುವಂತೆ ಆದೇಶ ನೀಡಿದೆಯಲ್ಲವೇ? ದೋಷ ಮುಕ್ತಗೊಳಿಸುವಂತೆ ಹೈಕೋರ್ಟ್ ಆದೇಶ ಈಗಾಗಲೇ ನೀಡಿದೆ. ಇಂತಹ ಆದೇಶ ಹೈಕೋರ್ಟ್ ನೀಡುತ್ತದೆಯೇ? ಎಂದು ಜಡ್ಜ್ ಪ್ರಶ್ನಿಸಿದರು.
ಆದೇಶ ನೀಡಿರುವ ರೀತಿ ನಮಗೆ ನೋವು ಉಂಟು ಮಾಡಿದೆ ಟ್ರಯಲ್ ಕೋರ್ಟ್ ತಪ್ಪು ಮಾಡುತ್ತಾರೆ ಎಂದರೆ ನಂಬಬಹುದು. ಆದರೆ ಹೈಕೋರ್ಟ್ ನೀಡಿರುವ ಕಾರಣಗಳನ್ನು ಒಪ್ಪುವುದು ಹೇಗೆ? ಹೈಕೋರ್ಟ್ ಜಾಮೀನು ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ತಿಳಿಸಿತು ನ್ಯಾಯ ಬದ್ಧವಾಗಿ ವಿವೇಚನೆ ಬಳಸಿಲ್ಲವೆಂಬುದು ನಮ್ಮ ಕಳವಳ. ಸಿಸಿಟಿವಿ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ ಕಾರಿನಲ್ಲಿ ಇರೋವರ ಅವರ ಬಗ್ಗೆ ಯಾವುದೇ ಗುರುತು ಪತ್ತೆಯಾಗಿಲ್ಲ. ಈ ಕೇಸಿನಲ್ಲಿ ಎಷ್ಟು ಸಾಕ್ಷಿಗಳಿದ್ದಾರೆ ಎಂದು ಜಡ್ಜ್ ಕೇಳಿದರು. 270 ಸಾಕ್ಷಿಗಳನ್ನು ಸಲ್ಲಿಸಲಾಗಿದೆ ಇನ್ನು ಟ್ರಯಲ್ ಆರಂಭವಾಗಿಲ್ಲ ಕಿರಣ್ ಸಾಕ್ಷರದಲ್ಲಿ ಪುನೀತ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಪ್ರಶ್ನಾರ್ಹವಾಗಿದೆ ಎಂದು ಸಿದ್ಧಾರ್ಥ ದವೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಹೈಕೋರ್ಟ್ ಸರಿಯಾದ ಭಾಷೆ ಬಳಸದಿರಬಹುದು. ಆದರೆ ಹೈಕೋರ್ಟ್ ಆದೇಶ ಸಮರ್ಪಕವಾಗಿದೆ. ಮಿಸ್ಟರ್ ಲೂತ್ರ 270 ಸಾಕ್ಷಿಗಳನ್ನು ಏಕೆ ಹೆಸರಿಸಲಾಗಿದೆ? ಟ್ರಯಲ್ ಮುಗಿಯಲು ಎಷ್ಟು ಕಾಲ ಬೇಕಾಗಲಿದೆ? ಎಂದು ಜಡ್ಜ್ ಪ್ರಶ್ನಿಸಿದರು. ರಾಜಕೀಯ ಪ್ರಸನ್ನ ಕುಮಾರ ಜೊತೆಗೆ ನಾನು ಮಾತನಾಡಿದೆ. ದಿನ ನಿತ್ಯವೂ ಕೇಸಿನ ಟ್ರಯಲ್ ನಡೆಸಬಹುದು. ಸುಮಾರು 70 ಸಾಕ್ಷಿಗಳು ಸಾಕಾಗಲಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಸಿದ್ಧಾರ್ಥ ಲೂತ್ರ ಜಡ್ಜ್ ಗೆ ತಿಳಿಸಿದರು. ಈ ಕೇಸಿಗೆ ಪ್ರತಿನಿತ್ಯ ವಿಚಾರಣೆ ಏಕೆ ಬೇಕು? ಬೇರೆ ಹಲವು ಕೇಸ್ಗಳು ಬಾಕಿ ಇರುವಾಗ ಇದಕ್ಕೆ ತರಾತುರಿ ಮಾಡುತ್ತಿದ್ದೀರಿ? ಇದು ಜಡ್ಜ್ ಪ್ರಶ್ನಿಸಿದರು.
ಯಾರೋ ಅಪ್ರೂವರ್ ಆಗಲು ಬರುತ್ತಿದ್ದಾರೆ ಅವರಿಗೆ ಕ್ಷಮಾದಾನ ನೀಡಿ ಪವಿತ್ರ ಗೌಡ ಪರ ವಕೀಲೆಯಿಂದ ಇದೀಗ ವಾದ ಮಂಡನೆ ಆರಂಭ ಆಯ್ತು ನೀವೇ ಈ ಕೇಸ್ ಆಗಲು ಕಾರಣ ನೀವು ಇಲ್ಲದಿದ್ದರೆ ಆಸಕ್ತಿ ವಹಿಸುತ್ತಿರಲಿಲ್ಲ ಎಂದು ಜಡ್ಜ್ ತಿಳಿಸಿದರು. ಸಮತಾ ಹೇಳಿಕೆ ಸಾಕ್ಷಿಯ ಹೇಳಿಕೆ ಉಲ್ಲೇಖಿಸಿ ಪವಿತ್ರ ಗೌಡ ಪರ ವಕೀಲೆ ವಾದ ಆರಂಭಿಸಿದರು. ಇವಳೇ ಸುಪ್ರೀಂಕೋರ್ಟ್ ಜಡ್ಜ್ ನಿಮ್ಮ ಲಿಖಿತ ವಾದ ಅಂಶವಿದ್ದರೆ ಸಲ್ಲಿಸಿ ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ ಎಂದು ತಿಳಿಸಿದರು.
ಒಂದೇ ಒಂದು ಗಾಯವು ಪವಿತ್ರ ಗೌಡರಿಂದ ಆಗಿಲ್ಲ ಚಪ್ಪಲಿಯಿಂದ ಹೊಡೆದಿದ್ದಾರೆ ಎಂಬ ಒಂದು ಹೇಳಿಕೆ ಮಾತ್ರವಿದೆ. 55 ಬಾರಿ A3 ಪವನ್ ಗೆ ಫೋನ್ ಮಾಡಿದ್ದೇಕೆ? ಎಂದು ಪ್ರಶ್ನಿಸಿದರು ಆತ ಕುಕ್ ಆಗಿದ್ದರಿಂದ ಕರೆ ಮಾಡಲಾಯಿತು ಎಂದು ಪವಿತ್ರ ಗೌಡ ಪರ ವಕೀಲೆ ಪ್ರಶ್ನೆಗೆ ಉತ್ತರಿಸಿದರು. ಮೊದಲ ಪತಿಯೊಂದಿಗೆ ವಿಚ್ಛೇದನವಾಗಿದೆಯೇ? ಎಂದು ಜಡ್ಜ್ ಪವಿತ್ರ ಗೌಡ ಪರ ವಕೀಲೆಗೆ ಪ್ರಶ್ನಿಸಿದರು. ಘಟನೆಗೆ ಮುಂಚೆ ಪರಸ್ಪರ ಸಂಪರ್ಕವಿರಲಿಲ್ಲ ಎಂದು ರಾಜಕೀಯ ಇದೆ ಹಾಗೆ ನಟಿಯಾಗಿದ್ದಾಳೆ ಒಂದು ಮಗು ಕೂಡ ಇದೆ ಎಂದು ಪವಿತ್ರಾ ಪರ ವಕೀಲೆ ತಿಳಿಸಿದರು.