ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಟ ದರ್ಶನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಟ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಎಲ್ಲ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಈ ಹಿನ್ನೆಲೆಯಲ್ಲಿ ನಟ ದರ್ಶನ್ ಆಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದು, ದರ್ಶನ್ ದಾಖಲಾಗಿರುವ ಬಿಜಿಎಸ್‍ಆಸ್ಪತ್ರೆಗೆ ಮುಂದೆ ನಟನ ಫೋಟೋಗೆ ಹಾಲಿನ ಆಭಿಷೇಕ ಮಾಡುತ್ತಿದ್ದಾರೆ. ಇನ್ನು ಸಿಹಿ ಹಂಚಿ ಸಂಭ್ರಮಿಸುತ್ತಿದ್ದು, ಬಾಸ್ ಬಾಸ್ ಡಿ ಬಾಸ್ ಎಂದು ಜೈಕಾರ ಹಾಕುತ್ತಿದ್ದಾರೆ.
ಅಂದ್ಹಾಗೆ, ರೇಣುಕಾ ಸ್ವಾಮಿ ಪ್ರಕರಣದ ಏಳು ಆರೋಪಿಗಳಿಗೆ ಹೈಕೋರ್ಟ್ ಇದೀಗ ಜಾಮೀನು ನೀಡಿದೆ. ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಇದೀಗ ಹೈಕೋರ್ಟ್ ಜಾಮೀನು ನೀಡಿದೆ.ಕಳೆದ ಆರು ತಿಂಗಳಿನಿಂದ ನಡೆದ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದರು.
ಇತ್ತೀಚಿಗೆ ಬೆನ್ನು ನೋವಿನ ಸಮಸ್ಯೆ ತಿಳಿಸಿ, ಬಳ್ಳಾರಿ ಜಿಲ್ಲೆ ಬಿಡುಗಡೆಯಾಗಿದ್ದರು. ಇತ್ತೀಚಿಗೆ ನಡೆದ ಒಂದು ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಎಸ್ ಎಸ್ ವಿಶ್ವಶಿತ್ ಶೆಟ್ಟಿ ಅವರು ನಟ ದರ್ಶನ್ ಸೇರಿದಂತೆ ಎಲ್ಲಾ ಏಳು ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
BREAKING : ರೇಣುಕಾಸ್ವಾಮಿ ಕೊಲೆ ಪ್ರಕರಣ ; ನಟ ‘ದರ್ಶನ್, ಪವಿತ್ರ ಗೌಡ ಸೇರಿ 7 ಆರೋಪಿ’ಗಳಿಗೆ ಜಾಮೀನು ಮಂಜೂರು
ಬೆಂಗಳೂರು : ಬೊಮ್ಮನಹಳ್ಳಿ & ದಕ್ಷಿಣ ವಲಯಗಳಲ್ಲಿ ಪಾದಚಾರಿ ಮಾರ್ಗ ‘ಒತ್ತುವರಿ ತೆರವು’ ಕಾರ್ಯಾಚರಣೆ
‘ಮಹಾ ಕುಂಭ ನಮ್ಮ ನಂಬಿಕೆಯ ದೈವಿಕ ಹಬ್ಬ’ : ಪ್ರಯಾಗ್ ರಾಜ್’ನಲ್ಲಿ ಹಲವು ಯೋಜನೆ’ಗಳಿಗೆ ‘ಪ್ರಧಾನಿ ಮೋದಿ’ ಚಾಲನೆ