ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಪ್ರಿಯಾಂಕ ಖರ್ಗೆ ಅವರ ವಿಶೇಷ ಅಧಿಕಾರಿ ಹಾಗೂ ಅವರ ಆಪ್ತ ಇದ್ದೇನೆ ಎಂದು ಸರ್ಕಾರಿ ನೌಕರರಿಗೆ ವಂಚನೆ ಎಸಗುತ್ತಿದ್ದ ತುಮಕೂರು ಮೂಲದ ಆರೋಪಿ ಒಬ್ಬನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ನಾನು ಆಪ್ತ ಆಗಿದ್ದೇನೆ ನಿಮಗೆ ವರ್ಗಾವಣೆ ಬೇಕಾದರೆ ನನಗೆ ಹೇಳಿ ಎಂದು ಸರ್ಕಾರಿ ನೌಕರರಿಗೆ ಕರೆ ಮಾಡಿ ರಘುನಾಥ್ ಎನ್ನುವ ವ್ಯಕ್ತಿ ಆಮೀಷ ಒಡ್ದುತ್ತಿದ್ದ. ಅಲ್ಲದೇ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಕಾರ್ಯದರ್ಶಿ ವಿಶೇಷ ಅಧಿಕಾರಿಯಂದು ವಂಚನೆ ಮಾಡಿದ್ದಾನೆ. ಇದೀಗ ತುಮಕೂರು ಮೂಲದ ರಘುನಾಥನನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತ ಹಾಗೂ ವಿಶೇಷ ಕಾರ್ಯದರ್ಶಿ ಎಂದು ರಘುನಾಥ್ ಸರ್ಕಾರಿ ನೌಕರರಿಗೆ ಕರೆ ಮಾಡುತ್ತಿದ್ದ. ನಿಮಗೆ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ರಘುನಾಥ್ ಸರ್ಕಾರಿ ಅಧಿಕಾರಿಗಳಿಗೆ ಆಮಿಷ ಒಡ್ದುತ್ತಿದ್ದ.ಅದೇ ರೀತಿ ಸಚಿವ ಪ್ರಿಯಾಂಕರಿಗೆ ವಿಶೇಷ ಅಧಿಕಾರಿ ಎಂದು ಇಂಜಿನಿಯರ್ ಒಬ್ಬರಿಗೆ ಕರೆ ಮಾಡಿರುವ ಆರೋಪ ಕೇಳಿ ಬಂದಿದೆ.