ಮಂಡ್ಯ : ಮಂಡ್ಯದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬಸ್ ರಿವರ್ಸ್ ತೆಗೆಯುವಾಗ ಅವಘಢ ನಡೆದಿದೆ. ಊಟ ಮಾಡುತ್ತ ಕುಳಿತಿದ್ದ ಮಹಿಳೆ ಮೇಲೆ ಬಸ್ ಹರಿದು ಮಹಿಳೆ ಸಾವನ್ನಪ್ಪಿದ್ದು, ಮತ್ತೊರ್ವ ಮಹಿಳೆಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಮಂಡ್ಯದ ಕೆಆರ್‌ಎಸ್ ನಲ್ಲಿ ರಾತ್ರಿ ನಡೆದಿದೆ.
ಕೇರಳ ಮೂಲದ ಕೌಸಲ್ಯ ಮೃತ ಮಹಿಳೆ ಎಂದು ತಿಳಿದುಬಂದಿದೆ. ಮಂಡ್ಯದ ಕೆಆರ್ ಎಸ್ ಗೆ ಪ್ರವಾಸಕ್ಕೆ ಬಂದಿದ್ದ ಕೌಸಲ್ಯ. ಕೆಆರ್‌ಎಸ್ ವೀಕ್ಷಣೆ ಬಳಿಕ ಪಾರ್ಕಿಂಗ್ ಬಳಿ ಕೌಸಲ್ಯ ಹಾಗ ನಾರಾಯಣಿ ಊಟ ಮಾಡ್ತಿದ್ದರು. ಈ ವೇಳೆ ಬಸ್ ಚಾಲಕ ಹಿಂದೆ ಇದ್ದ ಮಹಿಳೆಯರನ್ನ ಗಮನಿಸದೆ ರಿವರ್ಸ್ ತೆಗೆದುಕೊಂಡಿದ್ದಾನೆ.
ಮಕ್ಕಳನ್ನ ಪ್ರವಾಸಕ್ಕೆ ಕರೆತಂದಿದ್ದ ಕೆರಳ ಮೂಲದ ಬಸ್ ಇದಾಗಿದ್ದು, ಬಸ್ ಗುದ್ದಿದ ಪರಿಣಾಮ ಕೌಸಲ್ಯ ಸಾವನನಪ್ಪಿದ್ದರೆ, ನಾರಾಯಣಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.








